ಸೂರ್ಯಕುಮಾರ್ ಒನ್ ಡೇ ಸ್ಥಾನಕ್ಕೆ ಬಂತು ಕುತ್ತು.. ಕಮ್ಬ್ಯಾಕ್ ಮಾಡದೆ ಹೋದ್ರೆ ಕಷ್ಟ..!
SKY |
ಸ್ಕೈ ಹ್ಯಾಸ್ ನೋ ಲಿಮಿಟ್ ಟೀಂ ಇಂಡಿಯಾ ಕ್ರಿಕೆಟಿಗ ಸೂರ್ಯ ಕುಮಾರ್ ಬಗ್ಗೆ ಹೀಗೊಂದು ಮಾತು ಚಾಲ್ತಿಯಲ್ಲಿದೆ. ಆದ್ರೆ, ಸ್ಕೈಗೆ ಲಿಮಿಟ್ ಇದೆ. ತಂಡದಲ್ಲಿ ಸ್ಥಾನವನ್ನ ಫಿಕ್ಸ್ ಮಾಡಿಕೊಂಡಿರುವ ಸೂರ್ಯನ ಬಗ್ಗೆ ಹೀಗೆ ಯಾಕ್ ಹೇಳ್ತಿದ್ದಾರೆ ಅಂತಿದ್ದೀರಾ..? ಈ ಸ್ಪೋರಿ ನೋಡಿ ನಿಮಗೆ ಉತ್ತರ ಸಿಗುತ್ತೆ.
ಸೂರ್ಯ ಕುಮಾರ್ ಯಾದವ್..! ಲೇಟ್ ಆಗಿಯಾದ್ರೂ ಲೇಟೆಸ್ಟ್ ಆಗಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ಬ್ಯಾಟರ್.! 2010ರಿಂದ ದೇಶಿ ಟೂರ್ನಿಗಳಲ್ಲಿ ಹಾಗೂ ಐಪಿಎಲ್ನಲ್ಲಿ ರನ್ ಗುಡ್ಡೆ ಹಾಕಿದ್ರೂ, ಸೂರ್ಯನ ಪಾಲಿಗೆ ಟೀಮ್ ಇಂಡಿಯಾ ಬಾಗಿಲೇ ತೆರೆದಿರಲಿಲ್ಲ. ಐಪಿಎಲ್ನಲ್ಲಿ ಅಬ್ಬರಿಸಿದ್ರೂ ಆಯ್ಕೆ ಸಮಿತಿ ಗಮನಕ್ಕೆ ಸೂರ್ಯ ಬಂದಿರಲಿಲ್ಲ.
ಟೀಮ್ ಇಂಡಿಯಾದಿಂದ ಅವಕಾಶ ವಂಚಿತನಾಗಿಯೇ ಉಳಿದಿದ್ದ, ಸೂರ್ಯನಿಗೆ ಕೊನೆಗೂ ಚಾನ್ಸ್ ಒಲಿದಿದ್ದು 30ನೇ ವಯಸ್ಸಿನಲ್ಲಿ.. ಲೇಟ್ ಆಗಿ ಟೀಮ್ ಇಂಡಿಯಾ ಡೋರ್ ಓಪನ್ ಆದ್ರೂ ಸೂರ್ಯನ ಎಂಟ್ರಿ ಮಾತ್ರ ಲೇಟೆಸ್ಟ್ ಆಗಿತ್ತು. ತನ್ನದೇ ಆದ ಸ್ಟೈಲ್ನಲ್ಲಿ ಬ್ಯಾಟ್ ಬೀಸಿದ ಸ್ಕೈ, ಆಡಿದ ಕೆಲವೇ ಪಂದ್ಯಗಳಲ್ಲೀ ಟೀಮ್ ಇಂಡಿಯಾ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದಾರೆ. ಸೂರ್ಯ ಕ್ಲಾಸೀ ಪರ್ಫಾಮೆನ್ಸ್ ಹಾಗಿದೆ.
ಟಿ20 ಮಾದರಿಯಲ್ಲಂತೂ ಸೂರ್ಯನ ಅಬ್ಬರಕ್ಕೆ ಬ್ರೇಕ್ ಹಾಕೋರೆ ಇಲ್ಲ.. ಆಡೋ ಪ್ರತಿ ಇನ್ನಿಂಗ್ಸ್ನಲ್ಲೂ ಪ್ರಜ್ವಲಿಸ್ತಾ ಇರೋ ಸೂರ್ಯ, ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಆಗಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಇಂಗ್ಲೆಂಡ್ ಪ್ರವಾಸದ ಸರಣಿಯಲ್ಲೂ ಸೂರ್ಯನೇ ಗೆಲುವಿನ ರೂವಾರಿಯಾಗಿದ್ದು.., ಹೀಗಾಗಿಯೇ ಟೀಮ್ ಇಂಡಿಯಾದಲ್ಲಿ ಸೂರ್ಯನಿಗೆ ಸ್ಥಾನ ಫಿಕ್ಸ್ ಅಂತಾ ಎಲ್ಲರೂ ಹೇಳ್ತಿದ್ದಾರೆ. ಆದ್ರೆ, ಏಕದಿನ ಮಾದರಿಯಲ್ಲಿ ಸೂರ್ಯನ ಸ್ಥಾನಕ್ಕೆ ಸೈಲೆಂಟ್ ಆಗಿಯೇ ಕುತ್ತು ಬಂದಿದೆ.
ಏಕದಿನ ಮಾದರಿಯಲ್ಲಿ ಸೂರ್ಯನ ಸ್ಥಾನಕ್ಕೆ ಬಂದಿದೆ ಕುತ್ತು.!
ಸೂರ್ಯ ಕುಮಾರ್ ಯಾದವ್ ಟೀಮ್ ಇಂಡಿಯಾದ ಅವಿಭಾಜ್ಯ ಅಂಗ ಅನ್ನೋವಾಗ್ಲೇ ಹೀಗೊಂದು ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ಏಕದಿನದಲ್ಲಿ ಸೂರ್ಯ ಕುಮಾರ್ ನೀಡಿರುವ ಪ್ರದರ್ಶನ. ಈವರೆಗೆ 12 ಏಕದಿನ ಪಂದ್ಯವನ್ನಾಡಿರೋ ಸೂರ್ಯ ಗಳಿಸಿರೋದು ಕೇವಲ 332 ರನ್., ಇದರಲ್ಲಿ ಎರಡೇ ಎರಡು ಬಾರಿ ಮಾತ್ರ ಅರ್ಧಶತಕದ ಗಡಿದಾಟ್ಟಿದ್ದಾರಷ್ಟೇ.. ಕಳೆದ 5 ಇನ್ನಿಂಗ್ಸ್ಗಳಿದಂಲಂತೂ ಪ್ಲಾಫ್ ಶೋ..!
ಕಳೆದ 5 ಏಕದಿನ ಇನ್ನಿಂಗ್ಸ್ಗಳಲ್ಲಿ ಸೂರ್ಯ
ಕಳೆದ 5 ಏಕದಿನ ಇನ್ನಿಂಗ್ಸ್ಗಳಲ್ಲಿ ಸೂರ್ಯ ಕುಮಾರ್ ಗಳಿಸಿರೋದು ಕೇವಲ 71 ರನ್. ಇದರಲ್ಲಿ 27 ರನ್ ಗರಿಷ್ಟ ಸ್ಕೋರ್ ಆಗಿದ್ರೆ, ರನ್ಗಳಿಕೆಯ ಸರಾಸರಿ ಕೇವಲ 14.20 ಮಾತ್ರ.
T20 ಮಾದರಿಗೆ ಮಾತ್ರ ಸೂರ್ಯ ಕುಮಾರ್ ಸೀಮಿತಾನಾ.?
ಯೆಸ್..! ಟಿ20 ಮಾದರಿಯಲ್ಲಿ ಅಬ್ಬರಿಸ್ತಾ ಇರೋ ಸೂರ್ಯ, ಏಕದಿನ ಮಾದರಿಯಲ್ಲಿ ಪರದಾಟ ನಡೆಸ್ತಿರೋದು ಯಾಕೆ ಅನ್ನೋ ಪ್ರಶ್ನೆ ನಿಮ್ಮಲ್ಲೂ ಕಾಣದೇ ಇರಲ್ಲ. ಇದಕ್ಕೆ ಉತ್ತರ ಹುಡುಕಿದಾಗ ಹುಟ್ಟೋದು ಲಾಂಗೆಸ್ಟ್ ಫಾರ್ಮೆಟ್ ಆಡುವಷ್ಟು ಪೇಶನ್ಸ್, ಟೆಂಪರ್ಮೆಂಟ್ ಸೂರ್ಯನಿಗಿಲ್ವಾ ಅನ್ನೋ ಅನುಮಾನ..!
ರಾಹುಲ್ – ಪಂತ್ ಕಮ್ಬ್ಯಾಕ್ ಮಾಡಿದ್ರೆ ಸೂರ್ಯಗೆ ಬೆಂಚ್ ಫಿಕ್ಸ್.!
ಸದ್ಯ ವಿಂಡೀಸ್ ಪ್ರವಾಸದಲ್ಲಿರೋ ಸೂರ್ಯನಿಗೆ ಅವಕಾಶ ಸಿಗ್ತಿರೋದು ಖಾಯಂ ಆಟಗಾರರ ಅಲಭ್ಯತೆಯಿಂದಾಗಿ ಮಾತ್ರ. ಇನ್ಫ್ಯಾಕ್ಟ್ ಸೂರ್ಯ ಕುಮಾರ್ ಏಕದಿನ ಮಾದರಿಗೆ ಡೆಬ್ಯೂ ಮಾಡಿದ್ದು ಕೂಡ ಬಿಗ್ಸ್ಟಾರ್ಗಳ ಅಲಭ್ಯತೆಯಲ್ಲಿ ಶ್ರೀಲಂಕಾ ವಿರುದ್ಧ. ಆ ಬಳಿಕ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ಆಡಿದ್ದು ಕೂಡ ಹಲವರಿಗೆ ವಿಶ್ರಾಂತಿ ನೀಡಿದ ಕಾರಣಕ್ಕೆ.., ಒಂದು ವೇಳೆ ಮುಂದಿನ ಸರಣಿಗಳಲ್ಲಿ ಕೆಎಲ್ ರಾಹುಲ್, ರಿಷಭ್ ಪಂತ್, ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ರೆ, ಸೂರ್ಯನ ಸ್ಥಾನಕ್ಕೆ ಕುತ್ತು ಬರೋ ಸಾಧ್ಯತೆಯಿದೆ.
ತಂಡಕ್ಕೆ ಸ್ಟಾರ್ಗಳ ಕಮ್ಬ್ಯಾಕ್ ಬಳಿಕವೂ ಸೂರ್ಯನಿಗೆ ಸ್ಥಾನ ನೀಡಬೇಕಂದ್ರೆ, ಶ್ರೇಯಸ್ ಅಯ್ಯರ್ರನ್ನ ಡ್ರಾಪ್ ಮಾಡಬೇಕಾಗುತ್ತೆ. ವಿಂಡೀಸ್ ವಿರುದ್ಧ ಅಬ್ಬರಿಸಿ ಭರ್ಜರಿ ಫಾರ್ಮ್ಗೆ ಮರಳಿರೋ ಶ್ರೇಯಸ್ ಅಯ್ಯರ್ಗೆ ಕೊಕ್ ನೀಡೋದು ಕಷ್ಟ ಸಾಧ್ಯ.! ಹೀಗಾಗಿ ಸೂರ್ಯನ ಸ್ಥಾನದ ಸುತ್ತ ಗ್ರಹಣ ಕವಿದಿದೆ.
ವಿಂಡೀಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ್ರೆ ಮಾತ್ರ ಸೇಫ್.!
ಸೂರ್ಯ ಕುಮಾರ್ ಯಾದವ್ ಸ್ಥಾನಕ್ಕೆ ಕುತ್ತು ಬಂದಿದೆ ನಿಜ. ಹಾಗಂತ ಸಂಪೂರ್ಣ ಅವಕಾಶ ಕೈ ತಪ್ಪಿಲ್ಲ. ವಿಂಡೀಸ್ ವಿರುದ್ಧದ ಕೊನೆಯ ಏಕದಿನದಲ್ಲಿ ಸೂರ್ಯಗೆ ಕಣಕ್ಕಿಳಿಯೋ ಚಾನ್ಸ್ ಇದ್ದೇ ಇದೆ. ಇಲ್ಲಿ ಪರ್ಫಾಮ್ ಮಾಡಿದ್ರೆ, ಸೂರ್ಯ ಕುಮಾರ್ ಸ್ಥಾನ ಭದ್ರವಾಗಲಿದೆ. ಇಲ್ಲಿದಿದ್ರೆ, ಏಕದಿನ ವಿಶ್ವಕಪ್ ಆಡೋ ಕನಸು ಕೂಡ ಅನಿಶ್ಚಿತತೆಗೆ ಸಿಲುಕಲಿದೆ.
0 Comments