Ticker

6/recent/ticker-posts

ICC ODI Rankings: ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ನಾಲ್ವರಿಗೆ ಸ್ಥಾನ

 ICC ODI Rankings: ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ನಾಲ್ವರಿಗೆ ಸ್ಥಾನ


ICC ODI ranking



ICC ODI Rankings: ಐಸಿಸಿ ನೂತನ ODI ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕೂಡ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇನ್ನು ಟಾಪ್ 10 ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಕಾಣಿಸಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿತಕ್ಕೊಳಗಾಗಿದ್ದಾರೆ. ಹಾಗೆಯೇ ಇಂಗ್ಲೆಂಡ್ ವಿರುದ್ದ ಭರ್ಜರಿ ಶತಕ ಸಿಡಿಸಿರುವ ಸೌತ್ ಆಫ್ರಿಕಾದ ರಸ್ಸಿ ವಂಡರ್ ಡುಸ್ಸೆನ್ ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರಿದ್ದಾರೆ. ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈ ಬಾರಿ 4ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 5ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ದಕ್ಷಿಣ ಅಫ್ರಿಕಾ ಕ್ರಿಕೆಟ್ ಲೀಗ್: ಆರು ತಂಡಗಳೂ ಭಾರತೀಯ ಫ್ರ್ಯಾಂಚೈಸಿಗಳ ಪಾಲು

ಇಂಗ್ಲೆಂಡ್ ವಿರುದ್ದ ಭರ್ಜರಿ ಪ್ರದರ್ಶನ ನೀಡಿದ್ದ  ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಈ ಬಾರಿ ರ‍್ಯಾಂಕಿಂಗ್​ನಲ್ಲಿ ಮೇಲೇರಿದ್ದಾರೆ. ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಪಂತ್ 25 ಸ್ಥಾನ ಮೇಲೇರಿದ್ದು ಇದೀಗ ಏಕದಿನ ರ‍್ಯಾಂಕಿಂಗ್ ನಲ್ಲಿ 52ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಹಾರ್ದಿಕ್ ಪಾಂಡ್ಯ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ 42 ನೇ ಸ್ಥಾನಕ್ಕೆ ಮತ್ತು ಆಲ್‌ರೌಂಡರ್‌ಗಳ ವಿಭಾಗದಲ್ಲಿ 8 ನೇ ಸ್ಥಾನಕ್ಕೆ ತಲುಪಿದ್ದಾರೆ.


ಇನ್ನು ಬೌಲಿಂಗ್ ವಿಭಾಗದಲ್ಲಿ ಟಾಪ್ 10 ನಲ್ಲಿ ಟೀಮ್ ಇಂಡಿಯಾದ ಏಕೈಕ ಬೌಲರ್ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮತ್ತೊಮ್ಮೆ ನಂಬರ್ ಒನ್ ಆಗಿ ಹೊರಹೊಮ್ಮಿದ್ದರೆ, ಭಾರತದ ಜಸ್ಪ್ರೀತ್ ಬುಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. ನೂತನ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ.


ಟ್ರೆಂಟ್ ಬೌಲ್ಟ್ ಮತ್ತೊಮ್ಮೆ ನಂಬರ್ ಒನ್ ಆಗಿ ಹೊರಹೊಮ್ಮಿದ್ದರೆ, ಭಾರತದ ಜಸ್ಪ್ರೀತ್ ಬುಮ್ರಾ ಎರಡನೇ ಸ್ಥಾನದಲ್ಲಿದ್ದಾರೆ. ನೂತನ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ.



ಏಕದಿನ ಬ್ಯಾಟಿಂಗ್​ ರ‍್ಯಾಂಕಿಂಗ್ ಪಟ್ಟಿ:

  1. 1 – ಬಾಬರ್ ಆಜಂ (ಪಾಕಿಸ್ತಾನ್)
  2. 2 – ಇಮಾಮ್ ಉಲ್ ಹಕ್ (ಪಾಕಿಸ್ತಾನ್)
  3. 3 – ರಸ್ಸಿ ವಂಡರ್ ಡುಸ್ಸೆನ್ (ಸೌತ್ ಆಫ್ರಿಕಾ)
  4. 4 – ವಿರಾಟ್ ಕೊಹ್ಲಿ (ಭಾರತ)
  5. 5 – ರೋಹಿತ್ ಶರ್ಮಾ (ಭಾರತ)
  6. 6 – ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ)
  7. 7 – ರಾಸ್ ಟೇಲರ್ (ನ್ಯೂಜಿಲೆಂಡ್)
  8. 8 – ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
  9. 9 – ಜಾನಿ ಬೈರ್​ಸ್ಟೋವ್ (ಇಂಗ್ಲೆಂಡ್)
  10. 10 – ಆರೋನ್ ಫಿಂಚ್ (ಆಸ್ಟ್ರೇಲಿಯಾ)


ಏಕದಿನ ಬೌಲರ್​ ರ‍್ಯಾಂಕಿಂಗ್ ಪಟ್ಟಿ:

  1. 1– ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
  2. 2 - ಜಸ್​ಪ್ರೀತ್ ಬುಮ್ರಾ (ಭಾರತ)
  3. 3 - ಶಾಹೀನ್ ಅಫ್ರಿದಿ (ಪಾಕಿಸ್ತಾನ್)
  4. 4 - ಜೋಶ್ ಹ್ಯಾಝಲ್​ವುಡ್ (ಆಸ್ಟ್ರೇಲಿಯಾ)
  5. 5 - ಮುಜೀಬುರ್ ರೆಹಮಾನ್ (ಅಫ್ಘಾನಿಸ್ತಾನ್)
  6. 6 - ಮೆಹದಿ ಹಸನ್ (ಬಾಂಗ್ಲಾದೇಶ್)
  7. 7 - ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್)
  8. 8 - ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್)
  9. 9 - ಕ್ರಿಸ್ ವೋಕ್ಸ್ (ಇಂಗ್ಲೆಂಡ್)
  10. 10 - ರಶೀದ್ ಖಾನ್ (ಅಫ್ಘಾನಿಸ್ತಾನ್)


ಏಕದಿನ ಆಲ್​ರೌಂಡರ್ ರ‍್ಯಾಂಕಿಂಗ್ ಪಟ್ಟಿ:

  1. 1 - ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)
  2. 2 - ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್)
  3. 3 - ರಶೀದ್ ಖಾನ್ (ಅಫ್ಘಾನಿಸ್ತಾನ್)
  4. 4 - ಮಿಚೆಲ್ ಸ್ಯಾಂಟ್ನರ್ (ನ್ಯೂಜಿಲೆಂಡ್)
  5. 5 - ಕಾಲಿನ್ ಗ್ರ್ಯಾಂಡ್​ಹೋಮ್ (ನ್ಯೂಜಿಲೆಂಡ್)
  6. 6 - ಕ್ರಿಸ್ ವೋಕ್ಸ್ (ಇಂಗ್ಲೆಂಡ್)
  7. 7 - ಮೆಹದಿ ಹಸನ್ (ಬಾಂಗ್ಲಾದೇಶ್)
  8. 8 - ಹಾರ್ದಿಕ್ ಪಾಂಡ್ಯ (ಭಾರತ)
  9. 9 - ಝೀಶಾನ್ ಮಕ್ಸೂದ್ (ಯುಎಇ)
  10. 10 - ಇಮಾದ್ ವಾಸಿಂ (ಪಾಕಿಸ್ತಾನ್)




Post a Comment

0 Comments