Ticker

6/recent/ticker-posts

Azadi Ka Amrut Mahotsav: ಸ್ವಾತಂತ್ರ್ಯದ‌ ನಂತರ ಭಾರತದ ಕ್ರೀಡಾ ಲೋಕದ ಐತಿಹಾಸಿಕ ಘಟನಾವಳಿಗಳ‌ ಮೇಲೊಂದು ನೋಟ!

 

Azadi Ka Amrut Mahotsav: ಸ್ವಾತಂತ್ರ್ಯದ‌ ನಂತರ ಭಾರತದ ಕ್ರೀಡಾ ಲೋಕದ ಐತಿಹಾಸಿಕ ಘಟನಾವಳಿಗಳ‌ ಮೇಲೊಂದು ನೋಟ!


Azadi Ka Amrut Mahotsav


ಇಂದು ಕ್ರಿಕೆಟ್, ಬ್ಯಾಡ್ಮಿಂಟನ್, ಹಾಕಿ, ಅಥ್ಲೆಟಿಕ್ಸ್, ಬಾಕ್ಸಿಂಗ್ ಸೇರಿದಂತೆ ಇನ್ನೂ ಹಲವಾರು ಕ್ರೀಡಾ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಕೆಚ್ಚೆದೆಯ ಪ್ರದರ್ಶನವನ್ನು ನೀಡುವ ಮೂಲಕ ವಿಶ್ವ ಕ್ರೀಡಾಕೂಟಗಳಲ್ಲಿ ಭಾರತದ ತ್ರಿವರ್ಣ ಅರಳುವಂತೆ ಮಾಡಿದ್ದಾರೆ.


1947 ಆಗಸ್ಟ್ 15 ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತ ಬಳಿಕ ಭಾರತ (India) ದೇಶ ನಿಧಾನಗತಿಯಲ್ಲಿ ಬೆಳವಣಿಗೆಯ ದಾರಿ ಹಿಡಿದಂತೆ ಕ್ರೀಡಾ ಲೋಕ ಕೂಡ ಬೆಳೆಯುತ್ತ ಸಾಗಿತುಸ್ವಾತಂತ್ರ್ಯದ ನಂತರ ಭಾರತದ ಕ್ರೀಡಾರಂಗದಲ್ಲಿ ಸಾಕಷ್ಟು ಅವಿಸ್ಮರಣೀಯ ಸಾಧನೆಯ ಹೆಗ್ಗುರುತುಗಳು ಮೂಡಿದ್ದಿವೆಇಂದು ಕ್ರಿಕೆಟ್ (Cricket)ಬ್ಯಾಡ್ಮಿಂಟನ್ಹಾಕಿಅಥ್ಲೆಟಿಕ್ಸ್ಬಾಕ್ಸಿಂಗ್ ಸೇರಿದಂತೆ ಇನ್ನೂ ಹಲವಾರು ಕ್ರೀಡಾ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಕೆಚ್ಚೆದೆಯ ಪ್ರದರ್ಶನವನ್ನು ನೀಡುವ ಮೂಲಕ ವಿಶ್ವ ಕ್ರೀಡಾಕೂಟಗಳಲ್ಲಿ ಭಾರತದ ತ್ರಿವರ್ಣ ಅರಳುವಂತೆ ಮಾಡಿದ್ದಾರೆಅಂದಿನ ಧ್ಯಾನ್ ಚಂದ್ ರಿಂದ ಹಿಡಿದು ಇತ್ತೀಚಿನ ನೀರಜ್ ಚೋಪ್ರಾಮೀರಾಬಾಯಿ ಚಾನುಹಿಮಾದಾಸ್ ವರೆಗೆನಾರ್ಮನ್ ಪ್ರಿಚರ್ಡ್ ರಿಂದ ಪಿ.ವಿ. ಸಿಂಧೂವರೆಗೆ ಕ್ರೀಡಾ ಲೋಕದಲ್ಲಿ ಭಾರತದ ತ್ರಿವರ್ಣ ಧ್ವಜ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಿದೆಹಾಗಾದರೆ ಸ್ವಾತಂತ್ರ್ಯದ (Independence Day) ಬಳಿಕ ಭಾರತೀಯ ಕ್ರೀಡಾಪಟುಗಳ ಕೆಲ ಅವಿಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕೋಣ.

1948: ಸ್ವಾತಂತ್ರ್ಯ ಸಿಕ್ಕ ನಂತರ ದಕ್ಕಿದ ಮೊದಲ ಚಿನ್ನದ ಪದಕ:

ಭಾರತದ ಹಾಕಿ ತಂಡ ಒಲಿಂಪಿಕ್​​​ನಲ್ಲಿ ಮೂರು ಚಿನ್ನದ ಪದಕ ಗೆದ್ದಿತ್ತಾದರು ಅದು ಸ್ವಾತಂತ್ರ್ಯ ಸಿಗುವ ಮುನ್ನಅಂದರೆ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆ ನಡೆಸುತ್ತಿರುವಾಗಲೇಆದರೆ 1948ರಲ್ಲಿ ಲಂಡನ್​ನಲ್ಲಿ ನಡೆದ ಒಲಿಂಪಿಕ್​​​ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ನೆದರ್​​ಲೆಂಡ್ ವಿರುದ್ದ 2-1 ಅಂತರದ ಜಯ ಸಾಧಿಸಿ ಫೈನಲ್​ಗೆ ಲೆಗ್ಗೆ ಇಟ್ಟಿತ್ತುಬಳಿಕ ಫೈನಲ್​​ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಮಣಿಸಿ ಭರ್ಜರಿ ಜಯ ಸಾಧಿಸಿ ಸ್ವಾತಂತ್ರ್ಯದ ಬಳಿಕ ಮೊದಲ ಚಿನ್ನದ ಪದಕವನ್ನು ಭಾರತ ಪಡೆದುಕೊಂಡು ಇತಿಹಾಸ ಸೃಷ್ಟಿಸಿತು.

1951: ಮೊದಲ ಬಾರಿಗೆ ಭಾರತದಲ್ಲಿ ಏಷ್ಯನ್ ಗೇಮ್ಸ್:

ಮಾರ್ಚ್​ 1951ರಲ್ಲಿ ಭಾರತ ಮೊದಲ ಬಾರಿಗೆ ಸ್ವಾತಂತ್ರ್ಯ ಸಿಕ್ಕ ನಂತರ ಏಷ್ಯನ್ ಗೇಮ್ಸ್​ ಅನ್ನು ಆಯೋಜನೆ ಮಾಡಿತ್ತು. 11 ರಾಷ್ಟ್ರಗಳು ಇದರಲ್ಲಿ ಪಾಲ್ಗೊಂಡಿದ್ದುಸ್ವಾತಂತ್ರ್ಯಗೊಂಡ ದೇಶವು ತಮ್ಮ ಸ್ನೇಹದ ಭಾಂದವ್ಯವನ್ನು ಮೂಡಿಸುವುದು ಈ ಪಂದ್ಯವಳಿಯ ಉದ್ದೇಶವಾಗಿತ್ತುಇದರಲ್ಲಿ ಭಾರತದ ಲಾವಿ ಪಿಂಟೋ ಅವರು 100 ಹಾಗೂ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು.

1952: ಟೆಸ್ಟ್​ ಕ್ರಿಕೆಟ್ ಸರಣಿಯಲ್ಲಿ ಭಾರತಕ್ಕೆ ಮೊದಲ ಜಯ

ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯವನ್ನು 1932ರಲ್ಲಿ ಆಡಿತ್ತಾದರುಸ್ವಾತಂತ್ರ್ಯ ಸಿಕ್ಕ ನಂತರ ಭಾರತಕ್ಕೆ ಮೊದಲ ಜಯ ದೊರಕಿದ್ದು ಐದು ವರ್ಷಗಳ ನಂತರ 1952ರಲ್ಲಿಪಾಕಿಸ್ತಾನ ವಿರುದ್ಧ ಭಾರತ ಮೊದಲ ಹಾಗೂ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ 2-1 ಅಂತರದ ಜಯ ಸಾಧಿಸಿತ್ತು.

1958: ಕಾಮನ್​ವೆಲ್ತ್​ ಗೇಮ್ಸ್​ನ ಕುಸ್ತಿ ಪಂದ್ಯಾಟದಲ್ಲಿ ಭಾರತಕ್ಕೆ ಮೊದಲ ಚಿನ್ನ:

ಭಾರತದಲ್ಲಿ ಹಲವಾರು ಕ್ರೀಡಾಪಟುಗಳು ಕುಸ್ತಿಯಲ್ಲಿ ಸ್ಪರ್ಧಿಸಿದ್ದರಿಂದ ಕುಸ್ತಿ ಭಾರತದಲ್ಲಿ ಹೆಸರುವಾಸಿಯಾಯಿತುಆದರೆ 1958ರಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮೊದಲ ಚಿನ್ನದ ಪದಕ ಸಿಕ್ಕಿದ್ದು ಈಗ ಇತಿಹಾಸಭಾರತ ಈಗ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಕ್ರೀಡಾ ಕೂಟದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದೆ.

1960: ವಿಂಬಲ್ಡನ್​​ನಲ್ಲಿ ಸೆಮಿಫೈನಲ್​​ಗೆ ಲಗ್ಗೆ ಇಟ್ಟ ಭಾರತೀಯ:

ವಿಂಬಲ್ಡನ್ ವಿಶ್ವದ ಅತ್ಯಂತ ಹಳೆಯ ಟೆನ್ನಿಸ್ ಆಟಸ್ವಾತಂತ್ರ್ಯ ಸಿಕ್ಕ ನಂತರ ಇಂಗ್ಲೆಂಡ್ ಕ್ಲಬ್​​ನಲ್ಲಿ ಭಾರತದ ರಮನಾಥನ್ ಕೃಷ್ಣನ್ ಅವರು ಮೊದಲ ಬಾರಿಗೆ ಸೆಮಿ ಫೈನಲ್​ಗೆ ಲಗ್ಗೆ ಇಡುವ ಮೂಲಕ ಇತಿಹಾಸ ನಿರ್ಮಿಸಿದ್ದರು.

1961-62: ಟೆಸ್ಟ್ ಕ್ರಿಕೆಟ್​​ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಜಯ:

ಇಂಗ್ಲೆಂಡ್ ವಿರುದ್ಧ ಭಾರತ ಅನೇಕ ಪಂದ್ಯಗಳನ್ನಾಡಿದ್ದರು ಸರಣಿ ಜಯ ಭಾರತ ದಕ್ಕಿರಲಿಲ್ಲಆದರೆ 1961 ಡಿಸೆಂಬರ್ ಹಾಗೂ 1962 ಜನವರಿಯಲ್ಲಿ ಆಂಗ್ಲರು ಭಾರತಕ್ಕೆ ಟೆಸ್ಟ್ ಪಂದ್ಯಗಳ ಸರಣಿ ಆಡಲು ಕಾಲಿಟ್ಟಿದ್ದರುಇದರಲ್ಲಿ ಮೊದಲ ಮೂರು ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡರೆಉಳಿದ ಟೆಸ್ಟ್​ ಪಂದ್ಯದಲ್ಲಿ ಭಾರತೀರು ಗೆದ್ದು ಸ್ವಾತಂತ್ರ್ಯದ ನಂತರ ಬ್ರಿಟೀಷರ ವಿರುದ್ಧ ಮೊದಲ ಸರಣಿ ಜಯ ಸಾಧಿಸಿದರು.

1967: ಟೆಸ್ಟ್​ ಕ್ರಿಕೆಟ್​​ನಲ್ಲಿ ಮೊದಲ ಬಾರಿಗೆ ಭಾರತಕ್ಕೆ ವಿದೇಶದಲ್ಲಿ ಜಯ:

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದೇ ತಡ ಎಲ್ಲ ಕ್ಷೇತ್ರದಲ್ಲಿ ವೇಗವಾಗುತ್ತಾ ಸಾಗಿತುಈ ಹೊತ್ತಿಗೆ ಭಾರತ ಕ್ರಿಕೆಟ್ ತಂಡ ಬಲಿಷ್ಠ ತಂಡವಾಗಿ ರೂಪಿಗೊಂಡಿತ್ತುಇದೇ ಹುಮ್ಮಸ್ಸಿನಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸ ಬೆಳೆಸಿತ್ತುಇಲ್ಲಿ ಭಾರತ ತಂಡ ನ್ಯೂಜಿಲೆಂಡ್​ ಅನ್ನು 3-1 ಅಂತರದಿಂದ ಗೆದ್ದು 1967ರಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಗೆಲುವು ಸಾಧಿಸಿದ ಇತಿಹಾಸ ಬರೆಯಿತು.

1975: ವಿಶ್ವಕಪ್​​ನಲ್ಲಿ ಭಾರತ ಹಾಕಿ ತಂಡಕ್ಕೆ ಜಯ:

1975ರಲ್ಲಿ ಹಾಕಿ ವಿಶ್ವಕಪ್ ಅನ್ನು ಕೌಲಾ ಲಂಪುರದಲ್ಲಿ ಆಯೋಜಿಸಲಾಗಿತ್ತುಅಜಿತ್ ಪಾಲ್ ಸಿಂಗ್ ಅವರ ನಾಯಕತ್ವದಲ್ಲಿ ಭಾರತ ಹಾಕಿ ತಂಡ ಸೆಮಿಫೈನಲ್​​ನಲ್ಲಿ ಮಲೇಷ್ಯಾವನ್ನು 3-2 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿತ್ತುಫೈನಲ್ ಕಾದಾಟದಲ್ಲಿ ಬದ್ಧವೈರಿ ಪಾಕಿಸ್ತಾನದ ವಿರುದ್ಧ 2-1 ಅಂತರದ ಜಯ ಸಾಧಿಸಿ ಚಿನ್ನದ ಪದಕ ತನ್ನದಾಗಿಸಿ ಭಾರತ ದಾಖಲೆ ಬರೆಯಿತು.

1980: ಇಂಗ್ಲೆಂಡ್​ನಲ್ಲಿ ಗೆದ್ದು ಬೀಗಿದ ಪ್ರಕಾಶ್ ಪಡಕೋಣೆ:

ಇಂಗ್ಲೆಂಡ್​​ನ ಪ್ರತಿಷ್ಠಿತ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ದೇಶದ ಅತ್ಯುತ್ತಮ ಆಟಗಾರರು ಭಾಗವಹಿಸುತ್ತಿದ್ದರುಇದರಲ್ಲಿ ಭಾರತದ ಪ್ರಕಾಶ್ ಪಡುಕೋಣೆಯೂ ಒಬ್ಬರುಗಟಾನುಗಟಿ ಆಟಗಾರರನ್ನು ಸೋಲಿಸಿ ಇಂಗ್ಲೆಂಡ್​​​ನಲ್ಲಿ ಭಾರತದ ಪ್ರಕಾಶ್ ಅವರು ಜಯ ಸಾಧಿಸಿ ಇತಿಹಾಸ ನಿರ್ಮಿಸಿದರುಅಲ್ಲದೆ ಮುಂದಿನ ವರ್ಷ ನಡೆದ ವಿಶ್ವಕಪ್​ನಲ್ಲೂ ಪಡುಕೋಣೆ ಅವರು ಗೆದ್ದು ಭಾರತ ದೇಶಕ್ಕೆ ಚಿನ್ನದ ಪದಕನ್ನು ತಂದುಕೊಟ್ಟಿದ್ದರು.

1983: ಭಾರತ ಕ್ರಿಕೆಟ್ ತಂಡ ಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿದ ವರ್ಷ:

ಈ ಕ್ಷಣವನ್ನು ಭಾರತೀಯರು ಎಂದಿಗೂ ಮರೆಯಲು ಸಾಧ್ಯವಿಲ್ಲ. 1983, ಜೂನ್ 25ರಂದು ಭಾರತೀಯ ಕ್ರಿಕೆಟ್​ಗೆ ಹೊಸ ಭಾಷ್ಯ ಬರೆದ ದಿನಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಬಲಿಷ್ಠ ವೆಸ್ಟ್​​ ಇಂಡೀಸ್ ತಂಡವನ್ನು ವಿಶ್ವಕಪ್​​ನಲ್ಲಿ ಸೋಲಿಸಿತುಆಗಿನ 60 ಓವರ್​ ಪಂದ್ಯದಲ್ಲಿ ಭಾರತ ಕೇವಲ 183 ರನ್​ಗೆ ಸರ್ವಪತನ ಕಂಡಿತ್ತು. 184 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ವಿಡೀಸ್ 52 ಓವರ್​​ನಲ್ಲಿ 140 ರನ್​ಗೆ ಆಲೌಟ್ ಆಯಿತುಈ ಮೂಲಕ ಮೊದಲ ಬಾರಿಗೆ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಎತ್ತಿ ಹಿಡಿದು ಇತಿಹಾಸ ಬರೆದಿತ್ತುಈ ಬಗ್ಗೆ ಇದೇ ವರ್ಷ ಬಾಲಿವುಡ್​ನಲ್ಲಿ 1983 ಎಂಬ ಸಿನಿಮಾ ಕೂಡ ಬಿಡುಗಡೆ ಆಗಿದೆ.

1986: ಇತಿಹಾಸ ಸೃಷ್ಟಿಸಿದ ಪಿಟಿ ಉಷಾ:

ಪಿಟಿ ಉಷಾ ಅವರು ಒಳ್ಳೆಯ ಓಟಗಾರ್ತಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲಇವರು 1986 ಏಷ್ಯಾನ್​ ಗೇಮ್ಸ್​ನಲ್ಲಿಯೇ ತನ್ನ ಚತುರತೆಯ ಪ್ರದರ್ಶಿಸುವ ಮೂಲಕ ನಾಲ್ಕು ಚಿನ್ನದ ಪದಕಗಳನ್ನು ಗೆದ್ದಿದ್ದರುಇವರು 100 ಮೀಟರ್ಸ್​ ಸೇರದಿಂತೆ 200, 400, 4×400 ಮೀಟರ್​ ರಿಲೆಯಲ್ಲಿ ಯಲ್ಲೋ ಮೆಟಲ್​ ಗೆದ್ದಿದರು ಎಂಬುದು ಇತಿಹಾಸವಾಗಿದೆ.

1987: ಭಾರತದಲ್ಲಿ ಮೊದಲ ಬಾರಿ ವಿಶ್ವಕಪ್ ಕ್ರಿಕೆಟ್ ಆಯೋಜನೆ:

ವಿಶ್ವಕಪ್ ಗೆದ್ದ ನಂತರ ಭಾರತ ಕ್ರಿಕೆಟ್ ತಂಡ ಸಾಕಷ್ಟು ಬಲಶಾಲಿಯಾಯಿತುಬಿಸಿಸಿಐ ಕೂಡ ಇದರಲ್ಲಿ ಪ್ರಮುಖ ಪಾತ್ರವಹಿಸಿತ್ತುಆ ವರೆಗೆ ಕ್ರಿಕೆಟ್ ವಿಶ್ವಕಪ್ ಕೇವಲ ಇಂಗ್ಲೆಂಡ್​ನಲ್ಲಿ ಮಾತ್ರ ನಡೆಯುತ್ತಿತ್ತುಆದರೆ 1987ರಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್​ನಿಂದ ವಿಶ್ವಕಪ್​ ಭಾರತ ಹಾಗೂ ಪಾಕಿಸ್ತಾನ ದೇಶಗಳ ಆತಿಥ್ಯದಲ್ಲಿ ನಡೆಯಿತುಈ ವಿಶ್ವಕಪ್​​ನಲ್ಲಿ ಭಾರತ ತಂಡ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿತ್ತು.

1988: ಮೊದಲ ಬಾರಿ ಚೆಸ್​ನಲ್ಲಿ ಗೆದ್ದ ವಿಶ್ವನಾಥನ್ ಆನಂದ್​:

18 ವರ್ಷ ಪ್ರಾಯದ ವಿಶ್ವನಾಥ್ ಆನಂದ್ ಅವರು ಮೊದಲ ಬಾರಿ ಭಾರತದ ಪರ ಚೆಸ್ ಆಡಿ ಜಯ ಸಾಧಿಸಿದ ಆಟಗಾರರಾಗಿದ್ದಾರೆ.

1990: ಭಾರತ ದೇಶ ಕಬಡ್ಡಿ ಪರಿಚಯಿಸಿದ ವರ್ಷ:

1990ರಲ್ಲಿ ಬೀಜಿಂಗ್ ಏಷ್ಯಾ ಗೇಮ್ಸ್​​ನಲ್ಲಿ ಮೊಟ್ಟ ಮೊದಲ ಬಾರಿಗೆ ಕಬಡ್ಡಿ ಆಟವನ್ನು ಪರಿಚಯಿಸಲಾಯಿತುಇದರಲ್ಲಿ ಭಾರತ ಚಿನ್ನದ ಪದಕ ಕೂಡ ಗೆದ್ದಿತ್ತುಇಂದು ದೇಶದಲ್ಲಿ ಕಬಡ್ಡಿ ಸಾಕಷ್ಟು ಪ್ರಸಿದ್ಧಿ ಪಡೆದಿದೆಪ್ರತಿ ವರ್ಷ ಪ್ರೊ ಕಬಡ್ಡಿ ಲೀಗ್ ಕೂಡ ನಡೆಯುತ್ತದೆ.

2007: ಧೋನಿ ಬಳಗಕ್ಕೆ ಟಿ20 ವಿಶ್ವಕಪ್ ಟ್ರೋಫಿ:

2007ರ ಹೊತ್ತಿಗೆ ಚುಟುಕು ಕ್ರಿಕೆಟ್ ಮಾದರಿ ಆಗಿನ್ನೂ ಅಂಬೆಗಾಲಿಡುತ್ತಿತ್ತಷ್ಟೆಭಾರತದ ಕ್ರಿಕೆಟ್ ತಂಡ ಕೂಡ ಯುವಕರದ್ದುನಾಯಕನ (ಧೋನಿಮುಖವೂ ಹೊಸತೇಆದರೆ ಟೀಮ್ ಇಂಡಿಯಾ ಪಾಕಿಸ್ತಾನದ ಎದುರು ಐಸಿಸಿ ಟಿ20 ವಿಶ್ವಕಪ್ ಫೈನಲ್​ನಲ್ಲಿ ಗೆದ್ದು ಸಂಭ್ರಮಿಸಿತ್ತು. 1983ರ ನಂತರ ಎರಡನೇ ಐಸಿಸಿ ವರ್ಲ್ಡ್ ಪ್ರಶಸ್ತಿಯಿದು.

2008: ಚಿನ್ನಕ್ಕೆ ಗುರಿಯಿಟ್ಟ ಬಿಂದ್ರ:

2008ರ ಬೀಜಿಂಗ್ ಒಲಿಂಪಿಕ್ಸ್​ನ ಶೂಟಿಂಗ್ ವೈಯಕ್ತಿಕ ವಿಭಾಗದಲ್ಲಿ ಚಿನ್ನಕ್ಕೆ ಗುರಿಯಿಟ್ಟು ಭಾರತದ ಮೊಲದ ಶೂಟರ್ ಹಿರಿಮೆಗೆ ಅಭಿನವ್ ಬಿಂದ್ರಾ ಕಾರಣರಾಗಿದ್ದರು. 10 ಮೀಟರ್ ಏರ್ ರೈಫಲ್​ನಲ್ಲಿ ಬಿಂದ್ರ ಚಿನ್ನ ಗೆದ್ದಿದ್ದರುಇದೇ ವರ್ಷ ಒಲಿಂಪಿಕ್ಸ್​​ನಲ್ಲಿ ಬಾಕ್ಸರ್ ವಿಜೇಂದರ್ ಸಿಂಗ್ ಭಾರತ ಪರ ಒಲಿಂಪಿಕ್ಸ್ ಪದಕ (ಕಂಚುಗೆದ್ದ ಮೊದಲ ಬಾಕ್ಸರ್ ಎನಿಸಿಕೊಂಡಿದ್ದರು.

2021: ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ:

ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ ಜಾವೆಲಿನ್‌ ಥ್ರೋ ವಿಭಾಗದಲ್ಲಿ ನೀರಜ್‌ ಚೋಪ್ರಾ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ತಂದುಕೊಟ್ಟು ಇತಿಹಾಸ ಬರೆದಿದ್ದರುಆಗಸ್ಟ್ ರಂದು ನೀರಜ್‌ ತಮ್ಮ ಮೂರನೇ ಪ್ರಯತ್ನದಲ್ಲಿ 87.58 ಮೀಟರ್‌ ದೂರ ಜಾವೆಲಿನ್‌ ಎಸೆಯುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರುಆ ಮೂಲಕ ಒಲಿಂಪಿಕ್ಸ್‌ ಕ್ರೀಡಾಕೂಟದ ಟ್ರ್ಯಾಕ್‌ ಹಾಗೂ ಫೀಲ್ಡ್‌ ವಿಭಾಗದಲ್ಲಿ ಸ್ವರ್ಣ ಪದಕದ ಸಾಧನೆ ಮಾಡಿದ ಭಾರತದ ಮೊದಲ ಅಥ್ಲಿಟ್‌ ಎಂಬ ದಾಖಲೆಗೆ ನೀರಜ್‌ ಭಾಜನರಾಗಿದ್ದರು.

Post a Comment

0 Comments