ನಿಮ್ಮಜಮೀನಿನ ಮೂಲ (ಒರಿಜಿನಲ್) ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲ್ ನಲ್ಲೇ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ರೈತರು ತಮ್ಮ ಜಮೀನಿನ ಮೂಲ ದಾಖಲೆಯಾದ ಸರ್ವೆ ಟಿಪ್ಪಣಿ, ಮೂಲ ಸರ್ವೆ ಪ್ರತಿ ಪುಸ್ತಕವನ್ನುಮೊಬೈಲ್ ನಲ್ಲೇ ವೀಕ್ಷಿಸಬಹುದು. ಹೌದು, ರೈತರು ತಮ್ಮ ಜಮೀನಿನ ಮೂಲ ದಾಖಲೆ ಪಡೆಯಲು ಈಗ ಗ್ರಾಮ ಪಂಚಾಯತಿಯಾಗಲಿ ಅಥವಾ ತಾಲೂಕು ಕಚೇರಿಗಳಿಗೆ ಹೋಗಬೇಕಿಲ್ಲ. ತಾಲೂಕು ಸರ್ವೆ ಅಧಿಕಾರಿಗಳ ಮುಂದೆ ಗಂಟೆಗಟ್ಟಲೇ ನಿಲ್ಲಬೇಕಿಲ್ಲ.
ನಿಮ್ಮ ಜಮೀನಿನ ಮೂಲ ದಾಖಲೆ ಪಡೆಯಲು ಒಂದು ವೇಳೆ ನೀವು ಕಚೇರಿಗೆ ಹೋದರೆ ತಿಂಗಳುಗಟ್ಟಲೇ ಸಮಯ ಬೇಕಾಗುತ್ತದೆ. ಇಂದು ನಾಳೆ ಎಂಬ ಕಾಲ ಹರಣ ಮಾಡಬೇಕಿಲ್ಲ. ಅಧಿಕಾರಿಗಳ ಮುಂದೆ ಹೋಗಿ ಕೈಜೋಡಿಸಿ ನಿಲ್ಲಬೇಕಿಲ್ಲ. ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಮನೆಯಲ್ಲಿಯೇ ಕುಳಿತು ರೈತರು ತಮ್ಮ ಮೊಬೈಲ್ ನಲ್ಲಿಯೇ ಜಮೀನಿನ ಮೂಲ ದಾಖಲೆ ನೋಡಬಹುದು.
ಏನಿದು ಮೂಲ ದಾಖಲೆ?
ನಿಮ್ಮ ಜಮೀನಿನ ಸರ್ವೆ ನಂಬರ್ ಆರಂಭದಲ್ಲಿ ಅಳತೆ ಹೇಗಿತ್ತು ಅದರ ನಾಲ್ಕು ಮೂಲೆ ಯಾವ ಕಡೆ ಎಷ್ಟಿದೆ ಎಂಬುದನ್ನು ತೋರಿಸುವುದು ಹಾಗೂ ಅಕ್ಕಪಕ್ಕದ ಸರ್ವೆ ನಂಬರ್ ಮಾಹಿತಿಯೂ ಅದರಲ್ಲಿರುತ್ತದೆ.
ಮೂಲ ಸರ್ವೆ ನಂಬರ್ ಟಿಪ್ಪಣಿಯ ಪುಸ್ತಕದ ಪೇಜ್ ತುಂಬಾ ಹಳೆಯದಾಗಿರುತ್ತದೆ. ಇದು ಮೂಲ ದಾಖಲೆಯಾಗಿರುವುದರಿಂದ ಬಹಳ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಆದರೆ ನೀವು ನಮೂದಿಸಿದ ಸರ್ವೆ ನಂಬರ್ ಮಾತ್ರ ನಿಮಗೆ ಕ್ಲಿಯರ್ ಆಗಿ ಕಾಣುತ್ತದೆ.
ಮೂಲ ಸರ್ವೆ ಟಿಪ್ಪಣಿ ಪುಸ್ತಕ ನೋಡುವುದು ಹೇಗೆ?
ಮೂಲ ಸರ್ವೆ ಟಿಪ್ಪಣಿ ಪುಸ್ತಕ ನೋಡಬೇಕಾದರೆ ರೈತರು ಈ
https://landrecords.karnataka.gov.in/service137/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಸರ್ಕಾರದ ಸರ್ವೆ ಡಾಕುಮೆಂಟ್ ಪೇಜ್ ತೆರೆದುಕೊಳ್ಳುತ್ತದೆ.ಅಲ್ಲಿ ನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಹಾಗೂ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ಯಾವ ಸರ್ವೆ ನಂಬರಿನ ಮೂಲ ಟಿಪ್ಪಣಿ ಪುಸ್ತಕ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು. Surnoc ಬಳಿ * ನಮೂದಿಸಬೇಕು. ಹಿಸ್ಸಾ ನಂಬರ್ ನಮೂದಿಸಬೇಕು ಇದಾದ ಬಳಿಕ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಸರ್ವೆ ನಂಬರಿಗೆ ಸಂಬಂಧಿಸಿದ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ, ಕಾಯಂ ದರ ತಖ್ತೆ ಕಾಣುತ್ತದೆ. ಆಗ ನೀವು ಮೂಲ ಸರ್ವೆ ಟಿಪ್ಪಣಿ ಪುಸ್ತಕದ ಮುಂದುಗಡೆ ಕಾಣು ವೀವ್ ಡಾಕುಮೆಂಟ್ ಕಳೆಗಡೆ ಕಾಣುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರಿನ ಮೂಲ ಸರ್ವೆ ಟಿಪ್ಪಣಿ ಪುಸ್ತಕ ತೆರೆದುಕೊಳ್ಳುತ್ತದೆ.
ಇದು ಡಿಪಾರ್ಟ್ಮೆಂಟ್ ಆಫ್ ಸರ್ವೆ ಸೆಟಲ್ಮೆಂಟ್ ಆ್ಯಂಡ್ ಲ್ಯಾಂಡ್ ರಿಕಾರ್ಡ್ ಅಪ್ಲೋಡ್ ಮಾಡಿದ ಪಿಡಿಎಫ್ ಫೈಲ್ ಆಗಿರುತ್ತದೆ. ಇದನ್ನು ನೀವು ಕೇವಲ ನೋಡಬಹುದು. ಓರಿಜಿನಲ್ ಟಿಪ್ಪಣಿ ಪುಸ್ತಕ ಬೇಕಾದರೆ ಸರ್ವೆ ಕಚೇರಿಯಲ್ಲಿ ಪಡೆಯಬಹುದು.
ಮೂಲ ಸರ್ವೆ ಟಿಪ್ಪಣಿ ಪುಸ್ತಕದಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ಕಾಣುತ್ತದೆ. ಅಕ್ಕಪಕ್ಕದ ಸರ್ವೆ ನಂಬರ್ ಗಳು ಸಹ ನಮೂದಿಸಲಾಗಿರುತ್ತದೆ.
ಇದೇ ರೀತಿ ನೀವು ಮೂಲ ಸರ್ವೆ ಪ್ರತಿ ಪುಸ್ತಕ ಹಾಗೂ ಕಾಯಂ ದರ ತಖ್ತೆ ಪ್ರತಿಯನ್ನು ಸಹ ಮೊಬೈಲ್ ನಲ್ಲೇ ನೋಡಬಹುದು. ಸರ್ಕಾರವು ರೈತರಿಗೆ ತಮ್ಮ ಜಮೀನಿನ ದಾಖಲೆಗಳು ಸುಲಭವಾಗಿ ಸಿಗಲೆಂಬ ಉದ್ದೇಶದಿಂದಾಗಿ ಈ ವ್ಯವಸ್ಥೆ ಮಾಡಿದೆ. ರೈತರೂ ಸಹ ತುಂಬಾ ಸುಲಭವಾಗಿ ತಮ್ಮ ದಾಖಲೆಗಳನ್ನು ಮೊಬೈಲ್ ನಲ್ಲೇ ವೀಕ್ಷಿಸಬಹುದು.
0 Comments