Commonwealth Games Women's Cricket : ಇಂದು ಎರಡು ಸೆಮಿಫೈನಲ್ ಪಂದ್ಯಗಳು.. ಆಂಗ್ಲರ ವಿರುದ್ಧ ಕಾದಾಟ ನಡೆಸಲಿರುವ ಭಾರತ!
Commonwealth Games Women's Cricket: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್ ವಿಭಾಗವು ಈಗ ಸೆಮಿಫೈನಲ್ ಹಂತಕ್ಕೆ ತಲುಪಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿ ನಾಲ್ಕು ತಂಡಗಳು ಸೆಮಿಗೆ ಲಗ್ಗೆಯಿಟ್ಟಿದ್ದು, ಇಂದು ಫೈನಲ್ ಪ್ರವೇಶಕ್ಕಾಗಿ ಕಾದಾಟ ನಡೆಸಲಿವೆ.
ಬರ್ಮಿಂಗ್ಹ್ಯಾಮ್( ಇಂಗ್ಲೆಂಡ್): ಭಾರತ ಮಹಿಳಾ ಕ್ರಿಕೆಟ್ ತಂಡ ಈಗಾಗಲೇ ಸೆಮಿಫೈನಲ್‌ಗೆ ತಲುಪಿದ್ದು, ಇಂಗ್ಲೆಂಡ್ ವಿರುದ್ಧ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಂ ಇಂಡಿಯಾ ಮೊದಲನೇ ಸೆಮಿಫೈನಲ್ ಪಂದ್ಯವನ್ನು ಎದುರಿಸಲಿದೆ. ಇನ್ನು ಎರಡನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯಲಿದೆ.
ಭಾರತ ತಂಡ ಎ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿತು. ಇಂಗ್ಲೆಂಡ್ ತಂಡ ಗ್ರೂಪ್-ಬಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ ಮೂಲಕ ಅರ್ಹತೆ ಪಡೆದಿದೆ. ಎರಡನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯಲಿದೆ. ಮೊದಲ ಸೆಮಿಫೈನಲ್ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3.30ಕ್ಕೆ ನಡೆಯಲಿದ್ದು, ಎರಡನೇ ಪಂದ್ಯ ರಾತ್ರಿ 10.30ಕ್ಕೆ ನಡೆಯಲಿದೆ.
ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್ ಈವೆಂಟ್‌ನಲ್ಲಿ ನಾಲ್ಕು ತಂಡಗಳ ನಡುವೆ ಎರಡು ಸೆಮಿಫೈನಲ್‌ಗಳಿವೆ. ಈ ಎರಡೂ ಪಂದ್ಯಗಳು ಇಂದು ನಡೆಯಲಿವೆ. ಗೆದ್ದ ಮತ್ತು ಸೋಲನ್ನಪ್ಪಿದ ತಂಡಗಳು ಚಿನ್ನ ಮತ್ತು ಕಂಚಿನ ಪದಕಗಳಿಗಾಗಿ ಆಗಸ್ಟ್ 7 ರಂದು ಕಾದಾಟ ನಡೆಸಲಿವೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಎ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆಲುವು ದಾಖಲಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ 3 ವಿಕೆಟ್‌ಗಳಿಂದ ಸೋಲು ಕಂಡಿತು. ಆದರೆ, ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಸೋಲಿಸಿದರೆ, ಮೂರನೇ ಪಂದ್ಯದಲ್ಲಿ ಬಾರ್ಬಡೋಸ್ ತಂಡದ ವಿರುದ್ಧ 100 ರನ್‌ಗಳ ಅಂತರದಿಂದ ಭಾರತದ ವನಿತೆಯರು ಗೆಲುವು ಪಡೆದರು. ಈ ಮೂಲಕ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.
ಸಂಭವನೀಯ ಪಟ್ಟಿ: ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರೀಗಾಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ತಾನಿಯಾ ಭಾಟಿಯಾ (ವಿ.ಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಸ್ನೇಹ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್, ಯಾಸ್ತಿಕಾ ಭಾಟಿಯಾ, ಸಬ್ಬಿನೇನಿ ಮೇಘನಾ, ಹರೇಲೆನಿ ಮೇಘನಾ ಡಿಯೋಲ್, ರಾಜೇಶ್ವರಿ ಗಾಯಕ್ವಾಡ್
ಇಂಗ್ಲೆಂಡ್ ಮಹಿಳಾ ತಂಡ: ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲೆ, ಆಲಿಸ್ ಕ್ಯಾಪ್ಸೆ, ನಟಾಲಿ ಸ್ಕೈವರ್(ನಾಯಕಿ), ಆಮಿ ಜೋನ್ಸ್(ವಿ.ಕೀ), ಮೈಯಾ ಬೌಚಿಯರ್, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಫ್ರೇಯಾ ಕೆಂಪ್, ಇಸ್ಸಿ ವಾಂಗ್, ಸಾರಾ ಗ್ಲೆನ್, ಬ್ರಯೋನಿ ಸ್ಮಿತ್, ಫ್ರೇಯಾ ಡೇವಿಸ್, ಕೇಟ್ ಅಡ್ಡ.
0 Comments