CWG 2022 : ಪುರುಷರ ಟ್ರಿಪಲ್ ಜಂಪ್ ನಲ್ಲಿ ಚಿನ್ನ, ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಭಾರತ
CWG 2022 : ಪುರುಷರ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಇಂದು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಟ್ರಿಪಲ್ ಜಂಪ್‌ನಲ್ಲಿ ಎಲ್ದೋಸ್ ಪಾಲ್ 17.03 ಮೀ ಜಿಗಿತದ ಮೂಲಕ ಚಿನ್ನದ ಪದಕ ಗೆದ್ದರೆ, ಅಬ್ದುಲ್ಲಾ ಅಬೂಬಕರ್ 17.02 ಮೀ ಜಿಗಿತಡ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ.
ಇದು ಭಾರತಕ್ಕೆ ಕ್ಲೀನ್ ಸ್ವೀಪ್ ಆಗಬಹುದಿತ್ತು ಆದರೆ ಪ್ರವೀಣ್ ಚಿತ್ರವೆಲ್ ನಾಲ್ಕನೇ ಸ್ಥಾನ ಪಡೆದರು ಮತ್ತು ವಿಸ್ಕರ್ ಪದಕ ಮಿಸ್ ಮಾಡಿಕೊಂಡರು.
ಪಾಲ್ ತನ್ನ ಮೂರನೇ ಜಿಗಿತದ ಮೂಲಕ ಮುನ್ನಡೆ ಸಾದಿಸಿದರು, ಅವರು ತಮ್ಮ ಆರು ಪ್ರಯತ್ನಗಳಲ್ಲಿ 17 ಮೀ ಮಾರ್ಕ್ ಅನ್ನು ಮೀರಿಸಿದ ಏಕೈಕ ಕ್ರಿಡಾಪಟುವಾಗಿದ್ದರೆ.
ಅಬೂಬಕರ್ ಸ್ಪರ್ಧೆಯ ಉದ್ದಕ್ಕೂ ಸ್ಥಿರತೆ ಕಾಪಾಡಿಕೊಂಡು ಬಂದು ಅಂತಿಮವಾಗಿ ತಮ್ಮ 5 ನೇ ಪ್ರಯತ್ನದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಚಿತ್ರವೇಲ್ ತಮ್ಮ ಅತ್ಯುತ್ತಮ ಪ್ರಯತ್ನ ನೀಡಿದರು. ಆದರೆ ಅವರು ಬ್ರೂನಿಯ ಜಹ್-ನ್ಹೈ ಪೆರಿಂಚೀಫ್ ಅವರ 16.92 ಮೀ ಜಿಗಿತವನ್ನು ಜಿಗಿಯಲು ಸಾಧ್ಯವಾಗಲಿಲ್ಲ, ಹೀಗಾಗಿ ಕಂಚಿನ ಪದಕಕ್ಕೆ ಸಮಾಧಾನ ಪಡಬೇಕಾಯಿತು.
ಇದು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ 2022 ರ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ. 2018 ರಿಂದ ಅಥ್ಲೆಟಿಕ್ಸ್‌ನಲ್ಲಿ ಭಾರತದ ಒಟ್ಟಾರೆ ಪಟ್ಟಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
0 Comments