ವಿದ್ಯಾರ್ಥಿವೇತನಗಳು
ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕೆಳಕಂಡ ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದೆ.
1.ಪದವಿ ಮಟ್ಟದಲ್ಲಿ ವಿಜ್ಞಾನ ಓದುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ವಿದ್ಯಾರ್ಥಿವೇತನ (ಸರ್.ಸಿ.ವಿ.ರಾಮನ್)
ಸರ್.ಸಿ.ವಿ.ರಾಮನ್ ವಿದ್ಯಾರ್ಥಿವೇತನದಡಿ ಪ್ರತಿ ವಿದ್ಯಾರ್ಥಿಗೆ ರೂ.5000/- ಗಳಂತೆ ಸಾಮಾನ್ಯ ವರ್ಗದ ವಿಜ್ಞಾನ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
2.ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನ.
ಸಂಚಿ ಹೊನ್ನಮ್ಮ ವಿದ್ಯಾರ್ಥಿವೇತನದಡಿ ಬಿ.ಎ, ಬಿ.ಕಾಂ, ಬಿ.ಎಸ್ಸಿ ವ್ಯಾಸಂಗ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಪ್ರತಿ ವಿದ್ಯಾರ್ಥಿಗೆ ರೂ.2000/- ಗಳಂತೆ ವಿದ್ಯಾರ್ಥಿನಿಯರುಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
3.ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕಾರ
ಬಿ.ಪಿ.ಎಲ್ ಕಾರ್ಡು ಹೊಂದಿದ್ದು, ವೃತ್ತಿ ಶಿಕ್ಷಣ ವ್ಯಾಸಂಗ ಮಾಡುತ್ತಿರುವ (ಪ್ರತಿ ಜಿಲ್ಲೆಯ 10 ವಿದ್ಯಾರ್ಥಿನಿಯರಿಗೆ ಸಿ.ಇ.ಟಿ ಘಟಕದಲ್ಲಿ ಅವರುಗಳು ಪಾವತಿಸಿರುವ ಶುಲ್ಕ ಮರುಪಾವತಿ ಮಾಡಲಾಗುವುದು. (ನೂತನ & ನವೀಕರಣ).
4.ರಾಜೀವ್ ಗಾಂಧಿ ಸಾಲರೂಪದ ವಿದ್ಯಾರ್ಥಿವೇತನ
ವಾಷಿರ್ಕಕ 2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಬ್ಯಾಂಕಿನವರು ನೀಡಿದ ಸಾಲಕ್ಕೆ ವ್ಯಾಸಂಗದ ಅವಧಿಯ ಬಡ್ಡಿ ಸಬ್ಸಿಡಿಯನ್ನು ಸರ್ಕಾರದಿಂದ ಪಾವತಿಸಲಾಗುತ್ತಿದೆ.
5.ಹೆಚ್.ಐ.ವಿ/ಕುಷ್ಠರೋಗ ಪೀಡಿತರಿಗೆ/ಪೀಡಿತರ ಮಕ್ಕಳಿಗೆ ವಿದ್ಯಾರ್ಥಿವೇತನ
ಹೆಚ್.ಐ.ವಿ./ಏಡ್ಸ್ ಅಥವಾ ಕುಷ್ಟರೋಗಕ್ಕೆ ತುತ್ತಾದ ವಿದ್ಯಾರ್ಥಿಗಳ ಅಥವಾ ಮೇಲ್ಕಂಡ ರೋಗ ಪೀಡಿತರಿಗೆ (ಬದುಕಿರುವ/ಮೃತ ಹೊಂದಿರುವ ಪೋಷಕರಿಗೆ) ಜನಿಸಿದ ವಿದ್ಯಾರ್ಥಿಗಳಿಗೆ ಯೋಜನೆಯಡಿ ರೂ.21,800/-ಗಳ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.
6.ಪದವಿ ಮಟ್ಟದಲ್ಲಿ ಕನ್ನಡ/ಸಂಸ್ಕøತ/ಆಂಗ್ಲಭಾಷಾ ವಿದ್ಯಾರ್ಥಿವೇತನ
ಪದವಿ ಮಟ್ಟದಲ್ಲಿ ಕನ್ನಡ/ಸಂಸ್ಕøತ/ಆಂಗ್ಲಭಾಷೆಯನ್ನು ಪ್ರಧಾನವಿಷಯವನ್ನಾಗಿ ತೆಗೆದುಕೊಂಡು ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ.500/-ಗಳ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
7.ಎಸ್.ಸಿ/ಎಸ್.ಟಿ ಹಾಗೂ ಸೈನಿಕ ಸಿಬ್ಬಂದಿ ಮಕ್ಕಳ ವಿದ್ಯಾರ್ಥಿವೇತನ
ಎಸ್.ಸಿ/ಎಸ್.ಟಿ ಹಾಗೂ ಸೈನಿಕ ಸಿಬ್ಬಂದಿ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
8.ಆಂಗ್ಲೋ- ಇಂಡಿಯನ್ ವಿದ್ಯಾರ್ಥಿವೇತನ
ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಂಗ್ಲೋ ಇಂಡಿಯನ್ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿಗಾಗಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.
0 Comments