ಭಾರತೀಯ ಕ್ರಿಕೆಟಿಗ ಕೆ.ಎಲ್ ರಾಹುಲ್ʼಗೆ ಕೊರೊನಾ ಪಾಸಿಟಿವ್!
ನವದೆಹಲಿ: ಭಾರತದ ಹಿರಿಯ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ʼಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮತ್ತೊಂದು ಹಿನ್ನಡೆಯನ್ನ ಅನುಭವಿಸಿದ್ದಾರೆ ಎಂದು ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು ರಾಹುಲ್ ಗೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸರಣಿಯ ಕೊನೆಯ ಭಾಗಕ್ಕಾಗಿ ವೆಸ್ಟ್ ಇಂಡೀಸ್ ಗೆ ತೆರಳುವುದು ಅವರ ಚೇತರಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಆರಂಭಕ್ಕೆ ಒಂದು ದಿನ ಮುಂಚಿತವಾಗಿ ಐಪಿಎಲ್ 2022 ಪೂರ್ಣಗೊಂಡಾಗಿನಿಂದ ರಾಹುಲ್ ಆಟದಿಂದ ಹೊರಗುಳಿದಿದ್ದಾರೆ. ಇನ್ನು ರಾಹುಲ್ ಅದರ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದು, ಕೋವಿಡ್ ಗೆ ತುತ್ತಾಗುವ ಮೊದಲು ಚೆನ್ನಾಗಿ ಚೇತರಿಸಿಕೊಂಡಿದ್ದರು.
ಆದರೆ ಇದೀಗ ಮತ್ತೆ ಸೋಂಕು ದೃಢಪಟ್ಟಿದ್ದು ವೆಸ್ಟ್ ಇಂಡೀಸ್ ಸರಣಿಯಲ್ಲಿ ಭಾಗವಹಿಸುವುದು ಸಂಶಯವಾಗಿದೆ.
0 Comments