ಬ್ರಿಟನ್ ಪ್ರಧಾನಿ ರೇಸ್ ಗೆ ಬಿಗ್ ಟ್ವಿಸ್ಟ್: ರಿಷಿ ಸುನಾಕ್ ಗೆ ಹಿನ್ನೆಡೆ!
ಲಂಡನ್: ಬ್ರಿಟನ್ ಪ್ರಧಾನ ಮಂತ್ರಿ ಆಯ್ಕೆ ಪ್ರಕ್ರಿಯೆ ಬಹಳ ಕುತೂಹಲಕಾರಿಯಾಗಿ ನಡೆಯುತ್ತಿದ್ದು, ಅಂತಿಮ ಹಂತಕ್ಕೆ ತಲುಪಿದೆ. ಪ್ರಸ್ತುತ ಅಂತಿಮ ಸ್ಪರ್ಧಾ ಕಣದಲ್ಲಿ ರಿಷಿ ಸುನಕ್ ಮತ್ತು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಲಿಜ್ ಟ್ರಸ್ ಉಳಿದುಕೊಂಡಿದ್ದು, ಲಿಜ್ ಟ್ರಸ್ ಗಿಂತ ರಿಷಿ ಸುನಕ್ ಗೆ ಹಿನ್ನೆಡೆಯಾಗಿದೆ.
ರಿಷಿ ಸುನಕ್ 5 ಹಂತಗಳ ಮತದಾನ ಪ್ರಕ್ರಿಯೆಯಲ್ಲಿ ಸತತವಾಗಿ ಮುನ್ನಡೆ ಕಾಯ್ದುಕೊಂಡು ಅಂತಿಮ ಸುತ್ತು ತಲುಪಿದ್ದರು. ಆದರೆ ಬುಕ್ಕಿಗಳ ಫೇವರಿಟ್ ಲೀಸ್ಟ್ ನಲ್ಲಿ ಲಿಜ್ ಟ್ರಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಲಿಜ್ ಟ್ರಸ್ ದಕ್ಷಿಣ ಲಂಡನ್ನ ಕೌನ್ಸಿಲರ್ ಆಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಸಂಸದೆಯಾಗಿ ಬ್ರಿಟನ್ ಸಂಸತ್ ಪ್ರವೇಶಿಸಿದ್ದರು. 2010ರಲ್ಲಿ ಸೌತ್ ವೆಸ್ಟ್ ನಾರ್ಫೋಕ್ನಿಂದ ಗೆದ್ದ ಲಿಜ್ ಟ್ರಸ್, ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. 2012ರಲ್ಲಿ ಪ್ರಧಾನಿ ಡೇವಿಡ್ ಕ್ಯಾಮರೋನ್ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣ ಸಚಿವೆಯಾಗಿದ್ದ ಲಿಜ್ ಟ್ರಸ್ ಅವರಿಗೆ ಪರಿಸರ ಕಾರ್ಯದರ್ಶಿಯಾಗಿ ಬಡ್ತಿ ನೀಡಲಾಗಿತ್ತು. ಲಿಜ್ ಟ್ರಸ್ ಕಳೆದ ವರ್ಷ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.
ಬುಕ್ಕಿಗಳ ಪೈಕಿ ಲಿಜ್ ಟ್ರಸ್ ಫೇವರಿಟ್ ಎನಿಸಿಕೊಂಡಿದ್ದರೆ, ಮತಗಳ ಆಧಾರದಲ್ಲಿ ರಿಶಿ ಸುನಕ್ ಫೇವಿರಿಟ್ ಆಗಿದ್ದಾರೆ. ಐದನೇ ಸುತ್ತಿನಲ್ಲಿ ರಿಷಿ 137 ಮತ ಪಡೆದಿದ್ದರೆ, ಲಿಜ್ ಟ್ರಸ್ 113 ಮತ ಪಡೆದಿದ್ದಾರೆ.
0 Comments