ಕ್ರಿಕೆಟ್ ಫ್ಯಾನ್ಸ್ಗೆ ಗುಡ್ ನ್ಯೂಸ್; ಶೀಘ್ರದಲ್ಲಿಯೇ ಮಿನಿ IPL ಪ್ರಾರಂಭ, ಈ ಪಟ್ಟಿಯಲ್ಲಿ RCB ಇದ್ಯಾ?
ಐಪಿಎಲ್ 2023 (IPL 2023) ಕ್ಕಿಂತ ಮೊದಲು ಮಿನಿ ಐಪಿಎಲ್ ನಡೆಯಲಿದೆ. ಈ ಪಂದ್ಯಾವಳಿಯು ಭಾರತದಲ್ಲಿ ಅಲ್ಲ ದಕ್ಷಿಣ ಆಫ್ರಿಕಾದಲ್ಲಿ (South Africa) ನಡೆಯಲಿದೆ.
ಯಾವ ತಂಡಕ್ಕೆ ಯಾವ ಹೆಸರು?:
ಫ್ರ್ಯಾಂಚೈಸಿಗಳನ್ನು ಈ ತಿಂಗಳ ಕೊನೆಯಲ್ಲಿ ಘೋಷಿಸಬಹುದು. ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವನ್ನು ಮುಂಬೈ ಇಂಡಿಯನ್ಸ್‌ಗೆ ಕೇಪ್‌ಟೌನ್, ಚೆನ್ನೈ ಸೂಪರ್ ಕಿಂಗ್ಸ್‌ಗೆ ಜೋಹಾನ್ಸ್‌ಬರ್ಗ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೆಂಚುರಿಯನ್ ಎಂದು ಹೆಸರಿಸಲಾಗುವುದು ಎಂಬ ಮಾಹಿತಿ ಇದೆ. ಐಪಿಎಲ್ 2022 ರಲ್ಲಿ ಪಾದಾರ್ಪಣೆ ಮಾಡಲಿರುವ ಲಕ್ನೋ, ಡರ್ಬನ್ ಫ್ರಾಂಚೈಸಿಗಾಗಿ ಉತ್ಸುಕವಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಪೋರ್ಟ್ ಎಲಿಜಬೆತ್ ತಂಡದಲ್ಲಿ ಆಸಕ್ತಿ ಹೊಂದಿದೆ.
ಮುಂಬೈ-ಚೆನ್ನೈ ಅತಿ ಹೆಚ್ಚು ಬಿಡ್:
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಖರೀದಿಸಲು ಸುಮಾರು 250 ಕೋಟಿ ರೂ. ಐಪಿಎಲ್ ಮಾದರಿಯ ಪ್ರಕಾರ, ಪ್ರತಿ ತಂಡವು 10 ವರ್ಷಗಳವರೆಗೆ ಫ್ರಾಂಚೈಸಿ ಶುಲ್ಕದ 10 ಪ್ರತಿಶತವನ್ನು ಪಾವತಿಸಬೇಕಾಗುತ್ತದೆ.
ಬಿಡ್ಡಿಂಗ್ ನಲ್ಲಿ ಭಾಗವಹಿಸದ RCB?:
ಇನ್ನು, ಈ ಮಿನಿ ಐಪಿಎಲ್ ನಲ್ಲಿ ಆರ್ಸಿಬಿ ತಂಡವು ಭಾಗವಹಿಸುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ ಆರ್ಸಿಬಿ ಬಿಡ್ಡಿಂಗ್ ನಲ್ಲಿ ಭಾಗವಹಿಸಲಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಈ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಹೇಗಿರಲಿದೆ ಮಿನಿ ಐಪಿಎಲ್:
ಕ್ರಿಕೆಟ್ ಸೌತ್ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‌ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‌ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ ಎಂದು ಕ್ರಿಕೆಟ್ ಸೌತ್ ಆಫ್ರಿಕಾ ಮಾಹಿತಿ ನೀಡದೆ. ಆದರೆ ಉಳಿದಂತೆ ಪಂದ್ಯ ಆರಂಭ ಯಾವಾಗ, ಯಾವ ಚಾನಲ್ ನಲ್ಲಿ ಪ್ರಸಾರವಾಗಲಿದೆ ಎನ್ನುವ ಯಾವ ಮಾಹಿತಿಯೂ ಲಭ್ಯವಾಗಿಲ್ಲ.
0 Comments