ಟೀಂ ಇಂಡಿಯಾ ಪರ ಆಡುವಾಗ ಪದೇ ಪದೇ ರೆಸ್ಟ್-IPL ಆಡಲು ಮಾತ್ರ ಫಿಟ್ ಆ್ಯಂಡ್ ಫೈನ್..
ಕಳೆದೆರೆಡು ವರ್ಷಗಳಲ್ಲಿ ಟೀಮ್ ಇಂಡಿಯಾದ ಹಲವು ಆಟಗಾರರು, ಇಂಜುರಿ, ರೆಸ್ಟ್ ಕಾರಣದಿಂದ ಹಲವು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಹಾಗಾದ್ರೆ, ಯಾರ್ ಯಾರು ಎಷ್ಟೆಷ್ಟು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ ಗೊತ್ತಾ..?
ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಕೆಲ ಪ್ರಮುಖ ಆಟಗಾರರಿಗೆ ಪದೇ ಪದೇ ರೆಸ್ಟ್ ನೀಡಲಾಗ್ತಿದೆ. ಅದ್ರಲ್ಲೂ ವೆಸ್ಟ್ ಇಂಡೀಸ್ ಟೂರ್ಗೆ ಸೀನಿಯರ್ ಆಟಗಾರರಿಗೆ ರೆಸ್ಟ್ ನೀಡಿರೋದು ಭಾರತೀಯ ಕ್ರಿಕೆಟ್ನಲ್ಲಿ ಹಾಟ್ ಟಾಪಿಕ್ ಆಗಿ ಮಾರ್ಪಟ್ಟಿದೆ. ಏಕದಿನ ಸರಣಿಯಿಂದ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹೊರುಗುಳಿದಿದ್ದು, ಶಿಖರ್ ಧವನ್, ತಂಡವನ್ನ ಲೀಡ್ ಮಾಡಲಿದ್ದಾರೆ. ಇನ್ನು ಟಿ20 ಸರಣಿಗೆ ರೋಹಿತ್ ಶರ್ಮಾ, ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರೆ, ವಿರಾಟ್ ಕೊಹ್ಲಿ ಈ ಸರಣಿಯಿಂದಲೂ ಹೊರಗುಳಿಯಲಿದ್ದಾರೆ.
ಇಂಜುರಿ, ರೆಸ್ಟ್ನಿಂದಾಗಿ ಹಲವು ಪಂದ್ಯಗಳು ಮಿಸ್..!
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಈ ಮೂವರು ಟೀಮ್ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್ಸ್. ಈ ತ್ರಿಮೂರ್ತಿಗಳು ತಂಡದಲ್ಲಿದ್ರೆ, ತಂಡದ ಸ್ಟ್ರೆಂಥ್ ಡಬಲ್ ಆಗುತ್ತೆ. ಆದ್ರೆ, ಈ ಸ್ಟಾರ್ ಪ್ಲೇಯರ್ಸ್, ಇಂಜುರಿ, ರೆಸ್ಟ್ ಕಾರಣದಿಂದಾಗಿ ಕಳೆದೆರೆಡು ವರ್ಷಗಳಿಂದ ಹಲವು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ.
ಆದ್ರೆ, ಮಿಲಿಯನ್ ಡಾಲರ್ ಟೂರ್ನಿ IPLನಲ್ಲಿ ಮಾತ್ರ, ಒಂದೇ ಒಂದು ಪಂದ್ಯವನ್ನ ಈ ಸೀನಿಯರ್ ಪ್ಲೇಯರ್ಸ್, ಮಿಸ್ ಮಾಡಿಕೊಂಡಿಲ್ಲ. ಇದರಿಂದ ಹಲವು ಮಾಜಿ ಆಟಗಾರರು, ದೇಶಕ್ಕಾಗಿ ಆಡೋವಾಗ ಇಂಜುರಿಗೊಳಗಾಗೋ, ರೆಸ್ಟ್ ಬೇಕೋ ಅನ್ನೋ ಆಟಗಾರರು, IPLನಲ್ಲಿ ಹೇಗೆ ಎಲ್ಲವನ್ನೂ ಮ್ಯಾನೇಜ್ ಮಾಡ್ತಾರೆ ಅಂತ ಪ್ರಶ್ನಿಸ್ತಿದ್ದಾರೆ.
• ರೋಹಿತ್ ಮಿಸ್ ಆದ ಪಂದ್ಯಗಳು :
ಕ್ಯಾಪ್ಟನ್ ರೋಹಿತ್ ಶರ್ಮಾ, ಕಳೆದೆರೆಡು ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಆಡಿದ ಮ್ಯಾಚ್ಗಳಿಗಿಂತ, ಮಿಸ್ ಮಾಡಿಕೊಂಡ ಪಂದ್ಯಗಳ ಸಂಖ್ಯೆಯೇ ಹೆಚ್ಚು. ಈ ಅವಧಿಯಲ್ಲಿ ರೋಹಿತ್, 10 ಟೆಸ್ಟ್, 12 ಒನ್ಡೇ, 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿಲ್ಲ.
• ಕೊಹ್ಲಿ ಮಿಸ್ ಆದ ಪಂದ್ಯಗಳು :
ಇನ್ನು ವಿರಾಟ್ ಕೊಹ್ಲಿ 2020ರಿಂದ ಇಲ್ಲಿವರೆಗೆ ಒಟ್ಟು 28 ಪಂದ್ಯಗಳಲ್ಲಿ ಆಡಿಲ್ಲ. ಇದ್ರಲ್ಲಿ 5 ಟೆಸ್ಟ್, 10 ಒನ್ಡೇ, 13 ಟಿ20 ಪಂದ್ಯಗಳು ಸೇರಿವೆ.
ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆದ್ರೆ, ಇದೇ ವರ್ಷ ಕೊಹ್ಲಿ ಈವರೆಗೂ ಒಟ್ಟು 3 ಟಿ20 ಸರಣಿಗಳಿಂದ ರೆಸ್ಟ್ ಪಡೆದಿದ್ದಾರೆ. ಕಳೆದ ವರ್ಷ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ, ಇನ್ನು ಇದೇ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟಿ20 ಸರಣಿ, ಈಗ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸಿರೀಸ್ನಿಂದಲೂ ಕೊಹ್ಲಿಗೆ ರೆಸ್ಟ್ ನೀಡಲಾಗಿದೆ.
• ರಾಹುಲ್ ಮಿಸ್ ಆದ ಪಂದ್ಯಗಳು :
ಕ್ಲಾಸ್ ಬ್ಯಾಟ್ಸ್ಮನ್, ಕನ್ನಡಿಗ ಕೆ.ಎಲ್ ರಾಹುಲ್ ಕಳೆದ ಎರಡು ವರ್ಷಗಳಲ್ಲಿ 5 ಬಾರಿ ಇಂಜುರಿಗೊಳಗಾಗಿದ್ದಾರೆ. ಆ ಮೂಲಕ ಒಟ್ಟು 15 ಟೆಸ್ಟ್, 6 ಏಕದಿನ ಹಾಗೂ 13 ಟಿ20 ಪಂದ್ಯಗಳನ್ನ ರಾಹುಲ್ ಮಿಸ್ ಮಾಡಿಕೊಂಡಿದ್ದಾರೆ.
• ಬೂಮ್ರಾ ಮಿಸ್ ಆದ ಪಂದ್ಯಗಳು :
ಇನ್ನು ಟೀಮ್ ಇಂಡಿಯಾ ಟ್ರಂಪ್ ಕಾರ್ಡ್ ಬೌಲರ್ ಜಸ್ಪ್ರಿತ್ ಬುಮ್ರಾ, 2020ರಿದ ಇಲ್ಲಿವರೆಗೆ ಒಟ್ಟು 5 ಟೆಸ್ಟ್, 6 ಏಕದಿನ ಹಾಗೂ 18 ಟಿ20 ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ.
• ಜಡೇಜಾ ಮಿಸ್ ಆದ ಪಂದ್ಯಗಳು :
ಹಾಗೇ ಆಲ್ರೌಂಡರ್ ರವೀಂದ್ರ ಜಡೇಜಾ, ಕಳೆದೆರೆಡು ವರ್ಷಗಳಲ್ಲಿ ಇಂಜುರಿ ಕಾರಣಕ್ಕೆ, 11 ಟೆಸ್ಟ್, 9 ಏಕದಿನ ಹಾಗೂ 21 ಟಿ20 ಪಂದ್ಯಗಳಿಂದ ದೂರ ಉಳಿದಿದ್ರು.
• ಪಂತ್ ಮಿಸ್ ಆದ ಪಂದ್ಯಗಳು :
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಕೂಡ, ಪಂದ್ಯಗಳನ್ನ ಮಿಸ್ ಮಾಡಿಕೊಳ್ಳೋದ್ರಲ್ಲಿ ಹಿಂದೆ ಬಿದ್ದಿಲ್ಲ. 2020ರ ಫೆಬ್ರವರಿಯಿಂದ ಈವರೆಗೂ ಪಂತ್, 2 ಟೆಸ್ಟ್, 7 ಏಕದಿನ, 15 ಟಿ20 ಪಂದ್ಯಗಳನ್ನ ಪಂತ್ ಆಡಿಲ್ಲ.
ಒಟ್ಟಿನಲ್ಲಿ.. ಟಿ20 ವಿಶ್ವಕಪ್ಗೆ ಮೂರು ಮೂರೇ ತಿಂಗಳು ಮಾತ್ರ ಬಾಕಿ ಇರೋವಾಗ, ಪ್ರಮುಖ ಆಟಗಾರರಿಗೆ ರೆಸ್ಟ್ ನೀಡಿದ್ದು ಎಷ್ಟು ಸರಿ ಅನ್ನೋ ಪ್ರಶ್ನೆಗೆ, ಆಯ್ಕೆ ಸಮಿತಿಯೇ ಉತ್ತರಿಸಬೇಕಿದೆ.
0 Comments