BIGG NEWS : ಇತಿಹಾಸದಲ್ಲಿ ಇದೇ ಮೊದಲು ; ಇಂಗ್ಲೆಂಡ್ ಕ್ರಿಕೆಟ್ ಮೈದಾನವೊಂದಕ್ಕೆ 'ಟೀಂ ಇಂಡಿಯಾ ದಿಗ್ಗಜ'ನ ಹೆಸರು
ಭಾರತದ ಖ್ಯಾತ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಪರೂಪದ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ನ ಲೀಸೆಸ್ಟರ್ಶೈರ್ ಕ್ರಿಕೆಟ್ ಮೈದಾನವನ್ನ ಗವಾಸ್ಕರ್ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ.
ವರದಿಗಳ ಪ್ರಕಾರ, ಇಂಗ್ಲೆಂಡ್ ಅಥವಾ ಯುರೋಪ್‌ನಲ್ಲಿರುವ ಕ್ರಿಕೆಟ್ ಮೈದಾನಕ್ಕೆ ಇದೇ ಮೊದಲ ಬಾರಿಗೆ ಭಾರತೀಯ ಕ್ರಿಕೆಟಿಗನ ಹೆಸರನ್ನ ಇಡಲಾಗಿದೆ.ಸುನಿಲ್ ಗವಾಸ್ಕರ್ ಈ ಅಪರೂಪದ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಂದ್ಹಾಗೆ, ಗವಾಸ್ಕರ್ ಇತ್ತೀಚೆಗೆ ಲೀಸೆಸ್ಟರ್ಶೈರ್ನಲ್ಲಿ ಐದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರು. ಲೀಸೆಸ್ಟರ್ಶೈರ್ ಕ್ರಿಕೆಟ್ ಅಸೋಸಿಯೇಷನ್ (LECA) ಕ್ರಿಕೆಟ್‌ಗೆ ಗವಾಸ್ಕರ್ ಅವ್ರ ಸೇವೆಯನ್ನು ಗುರುತಿಸಿ ತಮ್ಮ ಮೈದಾನಕ್ಕೆ ಗವಾಸ್ಕರ್ ಮೈದಾನ ಎಂದು ಹೆಸರಿಸಿದೆ.
ಗವಾಸ್ಕರ್ ಪ್ರಸ್ತುತ ತಮ್ಮ ಸೈಟ್ʼಗೆ ಸಂಬಂಧಿಸಿದ ನೋಂದಣಿ ಕೆಲಸದಲ್ಲಿ ಲಂಡನ್ʼನಲ್ಲಿದ್ದಾರೆ. ಸುನಿಲ್ ಗವಾಸ್ಕರ್ ಅವ್ರ ವರ್ಣಚಿತ್ರವನ್ನು ಈಗಾಗಲೇ ಲೀಸೆಸ್ಟರ್ಶೈರ್ ಮೈದಾನದ ಪೆವಿಲಿಯನ್‌ನ ಕೊನೆಯ ಗೋಡೆಯ ಮೇಲೆ ಚಿತ್ರಿಸಲಾಗಿದೆ. ಸನ್ನಿ ತನ್ನ ಭುಜದ ಮೇಲೆ ಕೈಯಲ್ಲಿ ಬ್ಯಾಟ್ ಹಿಡಿದು ಯುವ ಕ್ರಿಕೆಟಿಗನಂತೆ ಪೋಸ್ ನೀಡುತ್ತಿರುವ ಚಿತ್ರವನ್ನ ಚಿತ್ರಿಸಲಾಗಿದೆ. ಅದ್ರಂತೆ, ಗವಾಸ್ಕರ್ ತಾಂಜೇನಿಯಾ ಮತ್ತು ಅಮೆರಿಕದಲ್ಲಿ ಕ್ರಿಕೆಟ್ ಮೈದಾನಗಳನ್ನ ಹೊಂದಿದ್ದಾರೆ.
ಇನ್ನು ಲೀಸೆಸ್ಟರ್ಶೈರ್ ಮೈದಾನಕ್ಕೆ ತನ್ನ ಹೆಸರನ್ನ ಮರುನಾಮಕರಣ ಮಾಡಿದ ಬಗ್ಗೆ 73 ವರ್ಷದ ಅವರು ಪ್ರತಿಕ್ರಿಯಿಸಿದ್ದಾರೆ. 'ಲೀಸೆಸ್ಟರ್ಶೈರ್ ನಗರದಲ್ಲಿ ಕ್ರಿಕೆಟ್ ವಾತಾವರಣ ತುಂಬಾ ಹೆಚ್ಚಾಗಿದೆ. ವಿಶೇಷವಾಗಿ ಇಲ್ಲಿ, ಭಾರತೀಯ ಮೂಲದ ಸಾಕಷ್ಟು ಕ್ರಿಕೆಟಿಗರು ಇದ್ದಾರೆ. ಅದಕ್ಕಾಗಿಯೇ ಮೈದಾನಕ್ಕೆ ನನ್ನ ಹೆಸರಿಡುವುದು ದೊಡ್ಡ ಗೌರವವಾಗಿದೆ' ಎಂದು ಹೇಳಿದರು.
ಭಾರತೀಯ ಕ್ರಿಕೆಟ್ ದಂತಕತೆ, ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಇವ್ರು ಟೆಸ್ಟ್‌ನಲ್ಲಿ ಭಾರತದ ಪರ 10,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅವರು ಟೆಸ್ಟ್‌ನಲ್ಲಿ 34 ಶತಕಗಳನ್ನ ಗಳಿಸಿದರು ಮತ್ತು ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾದರು (ಸಚಿನ್ ತೆಂಡೂಲ್ಕರ್ ಅವರನ್ನು ಮುರಿಯುವವರೆಗೆ). ಅವರು ಟೆಸ್ಟ್ʼಗಳಲ್ಲಿ ಅತ್ಯುತ್ತಮ ಆರಂಭಿಕ ಬ್ಯಾಟ್ಸ್ ಮನ್ ಆಗಿ ಸಾರ್ವಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಗವಾಸ್ಕರ್ 1971ರಿಂದ 1987ರವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದರು ಮತ್ತು ಅಸಂಖ್ಯಾತ ದಾಖಲೆಗಳನ್ನ ಹೊಂದಿದ್ದಾರೆ. ಸುನಿಲ್ ಗವಾಸ್ಕರ್ ಭಾರತದ ಪರ 108 ಏಕದಿನ ಪಂದ್ಯಗಳಲ್ಲಿ 3092 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 27 ಅರ್ಧಶತಕಗಳು ಸೇರಿವೆ. 125 ಟೆಸ್ಟ್ ಪಂದ್ಯಗಳಲ್ಲಿ 10,122 ರನ್ ಗಳಿಸಿರುವ ಗವಾಸ್ಕರ್, 34 ಶತಕಗಳು ಮತ್ತು 45 ಅರ್ಧಶತಕಗಳನ್ನ ಗಳಿಸಿದ್ದಾರೆ.
0 Comments