Ticker

6/recent/ticker-posts

Asia Cup;ಕಮ್​ಬ್ಯಾಕ್​​ಗೆ ಕಿಂಗ್ ಕೊಹ್ಲಿ ರೆಡಿ-ಫಿಕ್ಸ್ ಆಯ್ತು ಬ್ಯಾಟಿಂಗ್ ಸ್ಲಾಟ್.. ಬದಲಾಗುತ್ತಾ ವಿರಾಟ್ ಲಕ್?

 Asia Cup;ಕಮ್​ಬ್ಯಾಕ್​​ಗೆ ಕಿಂಗ್ ಕೊಹ್ಲಿ ರೆಡಿ-ಫಿಕ್ಸ್ ಆಯ್ತು ಬ್ಯಾಟಿಂಗ್ ಸ್ಲಾಟ್.. ಬದಲಾಗುತ್ತಾ ವಿರಾಟ್ ಲಕ್?


ಏಷ್ಯಾಕಪ್​ ಶೆಡ್ಯೂಲ್​ ಪ್ರಕಟವಾಗೋದ್ರೊಂದಿಗೆ ವಿರಾಟ್​​ ಕೊಹ್ಲಿ ಕಮ್​ಬ್ಯಾಕ್​ಗೂ ವೇದಿಕೆ ಸಜ್ಜಾಗಿದೆ. ಆದ್ರೆ, ಕೊಹ್ಲಿ ಬ್ಯಾಟಿಂಗ್​ ಪೊಸಿಶನ್​ ಯಾವ್ದು ಅನ್ನೋ ಪ್ರಶ್ನೆ ಹುಟ್ಟಿದೆ. ಫೇವರಿಟ್​​ ಸ್ಲಾಟ್​ ನಂಬರ್​​ 3 ಆಗಿದ್ರೂ, ಏಷ್ಯಾಕಪ್​​ನಲ್ಲಿ ವಿರಾಟ್​​ ಬೇರೆಯದ್ದೇ ಕ್ರಮಾಂಕದಲ್ಲಿ ಆಡ್ತಾರೆ.

ಬಹುನಿರೀಕ್ಷಿತ ಏಷ್ಯಾಕಪ್​​ ಶೆಡ್ಯೂಲ್​ ಅನೌನ್ಸ್​ ಆಗಿದೆ. ಮಹತ್ವದ ಟೂರ್ನಿಯ ಎರಡನೇ ಫೈಟ್​​ನಲ್ಲೇ ಇಂಡೋ - ಪಾಕ್​ ಮುಖಾಮುಖಿಯಾಗ್ತಿರೋದಂತೂ, ಅಭಿಮಾನಿಗಳ ನಿರೀಕ್ಷೆಯನ್ನ ಇನ್ನಷ್ಟು ಹೆಚ್ಚಿಸಿದೆ. ಭಾರತ, ಪಾಕಿಸ್ತಾನ ಮಾತ್ರವಲ್ಲ.. ಇಡೀ ವಿಶ್ವ ಕ್ರಿಕೆಟ್​ ಲೋಕವೇ ಈ ಒಂದು ಪಂದ್ಯವನ್ನ ಕಣ್ತುಂಬಿಕೊಳ್ಳಲು ಕಾದು ಕುಳಿತಿದೆ. ಇದಕ್ಕೆ ಇಂಡೋ-ಪಾಕ್​ ಹೈವೋಲ್ಟೆಜ್​ ಟಚ್​​ ಇರೋದು ಮಾತ್ರವಲ್ಲ.., ವಿರಾಟ್​​ ಕೊಹ್ಲಿಯ ಕಮ್​ಬ್ಯಾಕ್​ ಕೂಡ ಒಂದು ಕಾರಣವಾಗಿದೆ.



ವಿರಾಟ್​​​ ಕೊಹ್ಲಿ ಕಮ್​ಬ್ಯಾಕ್​ಗೆ ವೇದಿಕೆ ಸಿದ್ಧ..

ಕಳದ ಕೆಲ ತಿಂಗಳಿನಿಂದ ಇಡೀ ವಿಶ್ವ ಕ್ರಿಕೆಟ್​​ ಲೋಕ ವಿರಾಟ್​​ ಕೊಹ್ಲಿ ಸುತ್ತಲೇ ಗಿರಕಿ ಹೊಡಿತಾಯಿದೆ. ಇದಕ್ಕೆ ಕಳಪೆ ಫಾರ್ಮ್​ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.. ಈಗ ಈ ಬಗೆಗಿನ ಚರ್ಚೆಗೆ ಬ್ರೇಕ್​​ ಹಾಕೋಕೆ ಸಮಯ ಬಂದಾಗಿದೆ. ಇಂಗ್ಲೆಂಡ್ ಪ್ರವಾಸದ ಬಳಿಕ ರಿಲ್ಯಾಕ್ಸ್​ ಮೂಡ್​​​ಗೆ ಜಾರಿದ್ದ ಕೊಹ್ಲಿ, ವೆಕೆಷನ್​ ಮುಗಿಸಿ ವಾಪಾಸ್ಸಾಗಿದ್ದು, ಏಷ್ಯಾಕಪ್​​ನಲ್ಲಿ ಕಣಕ್ಕಿಳಿಯೋಕೆ ಸಜ್ಜಾಗಿದ್ದಾರೆ. ಎಷ್ಯಾಕಪ್​ನಲ್ಲಿ ವಿರಾಟ ದರ್ಶನ ಫಿಕ್ಸ್​​ ಅಂತಾ ಈಗಾಗಲೇ ಅಭಿಮಾನಿಗಳು ಕೂಡ ಫಿಕ್ಸ್​ ಆಗಿದ್ದಾರೆ. ಆದ್ರೆ, ಕೊಹ್ಲಿಯ ಕಮ್​ಬ್ಯಾಕ್​​ಗೂ ಮುನ್ನ ಸ್ಲಾಟ್​​ನ ಸಮಸ್ಯೆ ಎದುರಾಗಿದೆ.



ಯಾವ ಸ್ಲಾಟ್​​ನಲ್ಲಿ ಬ್ಯಾಟ್​ ಬಿಸ್ತಾರೆ ಕಿಂಗ್​​ ಕೊಹ್ಲಿ..?

ವಿರಾಟ್​​ ಕೊಹ್ಲಿ ಕಮ್​​ಬ್ಯಾಕ್​​ಗೂ ಮುನ್ನ ಹುಟ್ಟಿರುವ ಮೇಜರ್​​ ಪ್ರಶ್ನೆ ಇದಾಗಿದೆ. ವಿಶ್ವಕಪ್​ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಂದ್ರೆ, ಕೊಹ್ಲಿ ಏಷ್ಯಾಕಪ್​ ಟೂರ್ನಿಯಲ್ಲಿ ಫಾರ್ಮ್​​ ಕಂಡುಕೊಳ್ಳೋದು ಅನಿವಾರ್ಯವಾಗಿದೆ. ಆದ್ರೆ, ಟೀಮ್​ ಮ್ಯಾನೇಜ್​​ಮೆಂಟ್​​ ಮುಂದೆ ಪ್ಲೇಯಿಂಗ್​​ ಇಲೆವೆನ್​​ ಸೆಟ್​​ ಮಾಡಿಕೊಳ್ಳೋ ಅನಿವಾರ್ಯತೆಯಲ್ಲಿದೆ. ಅದರಲ್ಲೂ ಆರಂಭಿಕರು ಯಾರು.? ಅನ್ನೋ ಪ್ರಶ್ನೆಗೆ ಉತ್ತರ ಸಿಗದೇ ದಿಕ್ಕೆಟ್ಟಿದೆ.



ಏಷ್ಯಾಕಪ್ ಟೂರ್ನಿಯಲ್ಲಿ ವಿರಾಟ್​​ ಕೊಹ್ಲಿ ಓಪನರ್​​..?

​ಫಿಟ್ನೆಸ್ ಸಮಸ್ಯೆ ಎದುರಿಸ್ತಾ ಇರೋ​​ ಕೆಎಲ್​ ರಾಹುಲ್​​ ಏಷ್ಯಾಕಪ್​ ಆಡೋದು ಬಹುತೇಕ ಡೌಟ್​​ ಆಗಿದೆ. ಹೀಗಾಗಿ ಮತ್ತೆ ಟೀಮ್​ ಇಂಡಿಯಾ ಪರ ಇನ್ನಿಂಗ್ಸ್​​ ಆರಂಭಿಸೋದು ಯಾರು ಅನ್ನೋ ಪ್ರಶ್ನೆ ಹುಟ್ಟಿದೆ. ಈಗಾಗಲೇ ಇಂಗ್ಲೆಂಡ್​​ ಹಾಗೂ ವೆಸ್ಟ್​​ ಇಂಡೀಸ್​ ಪ್ರವಾಸದಲ್ಲಿ ಪ್ರಯೋಗ ಮಾಡಿದ್ದೇಲ್ಲಾ ಫೇಲ್​ ಆಗಿದೆ. ಹೀಗಾಗಿ ಏಷ್ಯಾಕಪ್​​ನಲ್ಲಿ ರೋಹಿತ್​ ಶರ್ಮಾ ಜೊತೆ ವಿರಾಟ್​​ ಕೊಹ್ಲಿ ಇನ್ನಿಂಗ್ಸ್​ ಆರಂಭಿಸೋ ಸಾಧ್ಯತೆ ದಟ್ಟವಾಗಿದೆ. ಮಾಜಿ ಕ್ರಿಕೆಟಿಗ ಪಾರ್ಥಿವ್​​ ಪಟೇಲ್​​ ಕೂಡ ಇದೇ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.



'ಕೊಹ್ಲಿ ಇನ್ನಿಂಗ್ಸ್​ ಆರಂಭಿಸಬಹುದು'

'ನಾನು ಯಾವಾಗಲೂ ತಂಡ ಕಾಂಬಿನೇಶನ್​ ಬಗ್ಗೆ ಮಾತನಾಡುತ್ತೇನೆ. ಯಾಕಂದ್ರೆ ಅದೇ ಕೀ. ನೀವು ಏಷ್ಯಾಕಪ್​ನಲ್ಲಿ ವಿರಾಟ್​​ ಕೊಹ್ಲಿ ಇನ್ನಿಂಗ್ಸ್​ ಆರಂಭಿಸೋದನ್ನ ನೋಡಬಹುದು. ಕೆಎಲ್​ ರಾಹುಲ್ ಸದ್ಯ​ ಅನ್​ಫಿಟ್​​ ಆಗಿದ್ದಾರೆ. ಉಳಿದ ಆಟಗಾರರನ್ನ ಆರಂಭಿಕ ಸ್ಥಾನಕ್ಕೆ ಪ್ರಯೋಗಿಸಿ ಆಗಿದೆ. ಇಶಾನ್​ ಕಿಶನ್​, ರಿಷಭ್​ ಪಂತ್, ಸೂರ್ಯ ಕುಮಾರ್​​​ ಯಾರೂ ಇಂಪ್ಯಾಕ್ಟ್​ ಮಾಡಿಲ್ಲ'

ಪಾರ್ಥಿವ್​ ಪಟೇಲ್​​, ಮಾಜಿ ಕ್ರಿಕೆಟಿಗ

ಆರಂಭಿಕನಾಗಿ ವಿರಾಟ್​ ಕೊಹ್ಲಿ ಜಬರ್ದಸ್ತ್​​ ಪ್ರದರ್ಶನ..!

​ವೈಟ್​​ಬಾಲ್​ ಫಾರ್ಮೆಟ್​​ನಲ್ಲಿ ಕೊಹ್ಲಿಯ ಫೇವರಿಟ್​ ಸ್ಲಾಟ್​​ ನಂಬರ್​ 3. ಆದ್ರೆ, ಇದರ ಜೊತೆಗೆ ಟಿ20 ಮಾದರಿಯಲ್ಲಿ ಓಪನರ್​ ಆಗಿಯೋ ಕೊಹ್ಲಿ ಮಿಂಚಿದ್ದಾರೆ. ಆಡಿದ ಕೆಲ ಪಂದ್ಯಗಳಲ್ಲೇ ಜಬರ್​ದಸ್ತ್​​ ಪ್ರದರ್ಶನವನ್ನ ವಿರಾಟ್​ ನೀಡಿದ್ದಾರೆ.

  • ಪಂದ್ಯ 8
  • ರನ್​ 278
  • ಸರಾಸರಿ 39.71
  • ಸ್ಟ್ರೈಕ್​ರೇಟ್​​ 148.66

ಟೀಮ್​ ಇಂಡಿಯಾ ಪರ ಮಾತ್ರವಲ್ಲ.. ಐಪಿಎಲ್​​ನಲ್ಲೂ ಕೊಹ್ಲಿ ಆರಂಭಿಕನಾಗಿ ಪಾರಮ್ಯ ಮೆರೆದಿದ್ದಾರೆ. ಓಪನರ್​ ಆಗಿ ಕಣಕ್ಕಿಳಿದು ಬರೋಬ್ಬರಿ 5 ಶತಕವನ್ನೂ ಸಿಡಿಸಿದ್ದಾರೆ.



IPLನಲ್ಲಿ ಆರಂಭಿಕನಾಗಿ ಕೊಹ್ಲಿ..

  • ಪಂದ್ಯ 84
  • ರನ್​ 2972
  • 50/100 20/05
  • ಸ್ಟ್ರೈಕ್​ರೇಟ್​​ 134.54

ಟೀಮ್​ ದೃಷ್ಟಿಯಿಂದ ಮಾತ್ರವಲ್ಲ.. ವೈಯಕ್ತಿಕ ಪರ್ಫಾಮೆನ್ಸ್​ ದೃಷ್ಟಿಕೋನದಲ್ಲೂ ವಿರಾಟ್​ ಕೊಹ್ಲಿ ಓಪನರ್​ ಆಗಿ ಕಣಕ್ಕಿಳಿಯೋದು ಬೆಸ್ಟ್​. ಇದನ್ನ ಅಂಕಿ-ಅಂಶಗಳೇ ಹೇಳ್ತಿವೆ. ಸದ್ಯ ಆತ್ಮವಿಶ್ವಾಸದ ಕೊರತೆ ಎದುರಿಸ್ತಾ ಇರೋ ವಿರಾಟ್​ಗೆ ಆರಂಭಿಕನ ಸ್ಲಾಟ್​​ ಲಕ್​ ಫ್ಯಾಕ್ಟರ್​ ಆಗಿ ವರ್ಕ್​​ ಆದ್ರೂ ಅಚ್ಚರಿ ಪಡಬೇಕಿಲ್ಲ.


Post a Comment

0 Comments