Ticker

6/recent/ticker-posts

Breaking: CWG 2022: ಹಾಕಿಯಲ್ಲಿ ವೇಲ್ಸ್ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಭಾರತ

 

Breaking: CWG 2022: ಹಾಕಿಯಲ್ಲಿ ವೇಲ್ಸ್ ವಿರುದ್ಧ ಗೆದ್ದು ಸೆಮಿಫೈನಲ್‌ಗೇರಿದ ಭಾರತ



ಕಾಮನ್‌ವೆಲ್ತ್ ಗೇಮ್ಸ್‌ನ ಹಾಕಿ ಸ್ಪರ್ಧೆಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನಿಡುತ್ತಿದ್ದು ಮತ್ತೊಂದು ಗೆಲುವು ಸಾಧಿಸಿದೆ. ವೇಲ್ಸ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 4-1 ಅಂತರದಿಂದ ಭಾರತ ಭರ್ಜರಿ ಗೆಲುವು ಸಾಧಿಸಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ.

ಈ ಮೂಲಕ ಒಲಿಂಪಿಕ್ಸ್ ಬಳಿಕ ಭಾರತೀಯ ಹಾಕಿ ತಂಡ ಮತ್ತೊಂದು ಮಹತ್ವದ ಟೂರ್ನಿಯಲ್ಲಿ ಪದಕದ ಭರವಸೆ ಹೆಚ್ಚಿಸಿದೆ.

ಮೊದಲ ಕ್ವಾರ್ಟರ್‌ ಯುಆವುದೇ ಗೋಲುಗಳಿಲ್ಲದೆ ಅಂತ್ಯವಾದ ಬಳಿಕ ಭಾರತದ ಪರವಾಗಿ ಹರ್ಮನ್‌ಪ್ರೀತ್ ಅದ್ಭುತ ಪ್ರದರ್ಶನ ನೀಡಿದರು. ಪೆನಾಲ್ಟಿ ಕಾರ್ನ್‌ಅನ್ನು ಅದ್ಭುತವಾಗಿ ಬಳಸಿಕೊಂಡ ಹರ್ಮನ್‌ಪ್ರೀತ್ ಭಾರತಕ್ಕೆ 2-0 ಮುನ್ನಡೆಗೆ ಕಾರಣವಾದರು. ಬಳಿಕ ಮೂರನೇ ಕ್ವಾರ್ಟರ್‌ನಲ್ಲಿ ಹರ್ಮನ್‌ಪ್ರೀತ್ ಮತ್ತೊಂದು ಭರ್ಜರಿ ಗೋಲಿ ಬಾರಿಸುವ ಮೂಲಕ ಭಾರತದ ಪರವಾಗಿ ಹ್ಯಾಟ್ರಿಕ್ ಗೋಲಿ ಸಿಡಿಸಿದ ಸಾಧನೆ ಮಾಡಿದ್ದಾರೆ. ಇನ್ನು ಗುರ್ಜೀತ್ ಸಿಂಗ್ ಭಾರತದ ಪರವಾಗಿ ನಾಲ್ಕನೇ ಗೋಲು ಸಿಡಿಸಿದ್ದಾರೆ.


ಅಂತಿಮ ಕ್ವಾರ್ಟರ್‌ನಲ್ಲಿ ವೇಲ್ಸ್ ತಂಡ ಉತ್ತಮವಾಗಿ ಆಡಿತಾದರೂ ಅದು ಹೆಚ್ಚು ಉಪಯೋಗವಾಗಲಿಲ್ಲ. ಪೆನಾಲ್ಟಿ ಕಾರ್ನರ್‌ನ ಅವಕಾಶವನ್ನು ಬಳಸಿಕೊಂಡ ವೇಲ್ಸ್ ಒಂದು ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಸೊಲಿನ ಅಂತರವನ್ನು ತಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಈ ಗೆಲುವಿನೊಂದಿಗೆ ಭಾರತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಸೆಮಿ ಫೈನಲ್‌ಗೆ ಪ್ರವೇಶಿಸಿದೆ. ಇದೀಗ ಭಾರತ ತಂಡ ಕೆನಡಾ ಹಾಗೂ ಇಂಗ್ಲೆಂಡ್ ವಿರುದ್ಧದ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದು

'ಪೂಲ್ ಬಿ'ಯಲ್ಲಿ ಎಷ್ಟನೇ ಸ್ಥಾನ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಮೂಲಕ ಸೆಮಿಫೈನಲ್‌ನಲ್ಲಿ ಯಾರ ವಿರುದ್ಧ ಸೆಣಸಬೇಕಾಗಿದೆ ಎಂಬುದು ಸ್ಪಷ್ಟವಾಗಲಿದೆ.


ಇನ್ನು ಈ ಬಾರಿಯ ಪುರುಷರ ಹಾಕಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಮೊದಲ ಪಂದ್ಯ ಘಾನಾ ವಿರುದ್ಧ ನಡೆದಿದ್ದು ಈ ಪಂದ್ಯದಲ್ಲಿ ಭಾರತ 11-0 ಅಂತರದಿಂದ ಗೆಲುವು ಸಾಧಿಸಿತ್ತು.ಬಳಿಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 4-4 ಅಂತರದಿಂದ ಡ್ರಾ ಸಾಧಿಸಿತ್ತು. ಬಳಿಕ ಕೆನಡಾ ವಿರುದ್ಧ ನಡೆದ ಪಂದ್ಯದಲ್ಲಿ 8-0 ಅಂತರದಿಮದ ಮತ್ತೊಂದು ಬೃಹತ್ ಗೆಲುವು ಸಾಧಿಸಿದೆ. ಇದೀಗ ವೇಲ್ಸ್ ವಿರುದ್ಧ ಕೂಡ 4-1 ಅಂತರದ ಉತ್ತಮ ಅಂತರದಿಮದ ಗೆಲುವು ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ.

2022ರ ಕಾಮನ್‌ವೆಲ್ತ್‌ನಲ್ಲಿ ಭಾರತ ಪರ ಪದಕ ಗೆದ್ದವರು

1 ಸಂಕೇತ್ ಸರ್ಗರ್: ಬೆಳ್ಳಿ (ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್)

2 ಗುರುರಾಜ ಪೂಜಾರಿ: ಕಂಚು (ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್)

3 ಮೀರಾಬಾಯಿ : ಚಿನ್ನ (ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್ )

4 ಬಿಂದ್ಯಾರಾಣಿ ದೇವಿ: ಬೆಳ್ಳಿ (ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್ )

5 ಜೆರೆಮಿ ಲಾಲ್ರಿನ್ನುಂಗಾ: ಚಿನ್ನ (ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ )

6 ಅಚಿಂತಾ ಶೆಯುಲಿ: ಚಿನ್ನ (ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್ )

7 ಸುಶೀಲಾ ದೇವಿ ಲಿಕ್ಮಾಬಮ್: ಬೆಳ್ಳಿ (ಮಹಿಳೆಯರ 48 ಕೆಜಿ ಜೂಡೋ)

8 ವಿಜಯ್ ಕುಮಾರ್ ಯಾದವ್ :ಕಂಚು (ಪುರುಷರ 60 ಕೆಜಿ ಜೂಡೋ)

9 ಹರ್ಜಿಂದರ್ ಕೌರ್ :ಕಂಚು (ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್)

10 ಭಾರತೀಯ ಮಹಿಳಾ ತಂಡ: ಚಿನ್ನ (ಮಹಿಳೆಯರ ನಾಲ್ಕು ಲಾನ್ ಬೌಲ್‌ಗಳು)

11 ವಿಕಾಸ್ ಠಾಕೂರ್ :ಬೆಳ್ಳಿ (ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್)

12 ಭಾರತೀಯ ಪುರುಷರ ತಂಡ: ಚಿನ್ನ (ಪುರುಷರ ತಂಡ ಟೇಬಲ್ ಟೆನಿಸ್)

13 ಭಾರತೀಯ ಮಿಶ್ರ ತಂಡ: ಬೆಳ್ಳಿ (ಮಿಶ್ರ ತಂಡ ಬ್ಯಾಡ್ಮಿಂಟನ್)

14 ಲವ್‌ಪ್ರೀತ್ ಸಿಂಗ್: ಕಂಚು (ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್)

15 ಸೌರವ್ ಘೋಸಲ್ :ಕಂಚು (ಪುರುಷರ ಸಿಂಗಲ್ಸ್ ಸ್ಕ್ವಾಷ್)

16 ತುಲಿಕಾ ಮಾನ್ :ಬೆಳ್ಳಿ (ಮಹಿಳೆಯರ +78 ಕೆಜಿ ಜೂಡೋ)

17 ಗುರ್ದೀಪ್ ಸಿಂಗ್: ಕಂಚು (ಪುರುಷರ +109 ಕೆಜಿ ವೇಟ್ ಲಿಫ್ಟಿಂಗ್)

18 ತೇಜಸ್ವಿನ್ ಶಂಕರ್: ಕಂಚು (ಪುರುಷರ ಹೈಜಂಪ್ ಅಥ್ಲೆಟಿಕ್ಸ್)

Post a Comment

0 Comments