Ticker

6/recent/ticker-posts

ಕಾಮನ್‌ವೆಲ್ತ್ ಗೇಮ್ಸ್, ಐದನೆಯ ಸ್ಥಾನಕ್ಕೆ ಜಿಗಿದ ಭಾರತ

 

ಕಾಮನ್‌ವೆಲ್ತ್ ಗೇಮ್ಸ್, ಐದನೆಯ ಸ್ಥಾನಕ್ಕೆ ಜಿಗಿದ ಭಾರತ



ಕಾಮನ್‌ವೆಲ್ತ್ ಗೇಮ್ಸ್‌ನ ಕುಸ್ತಿ ಕಣದಲ್ಲಿ ಭಾರತವು ಮೂರು ಬಂಗಾರ, ಒಂದು ಬೆಳ್ಳಿ ಗೆಲ್ಲುವುದರೊಂದಿಗೆ ಪದಕ ಪಟ್ಟಿಯಲ್ಲಿ ಏಳನೆಯ ಸ್ಥಾನದಿಂದ ಅಯ್ದನೆಯ ಸ್ಥಾನಕ್ಕೆ ಜಿಗಿಯಿತು.

ಸಾಕ್ಷಿ ಮಲಿಕ್ ಅವರು 62 ಕಿಲೋ ವಿಭಾಗದಲ್ಲಿ, ಬಜರಂಗ್ ಪೂನಿಯಾ 65 ಕಿಲೋ ವಿಭಾಗದಲ್ಲಿ ಮತ್ತು ದೀಪಕ್ ಪೂನಿಯಾರು 86 ಕಿಲೋ ವಿಭಾಗದಲ್ಲಿ ಚಿನ್ನದ ಗಳಿಕೆ ಮಾಡಿದರು. ಫ್ರೀ ಸ್ಟೈಲ್ ಕುಸ್ತಿಯ 57 ಕಿಲೋ ವಿಭಾಗದಲ್ಲಿ ಅನ್ಶು ಮಲಿಕ್ ಬೆಳ್ಳಿ ಕೊರಳಿಗೇರಿಸಿಕೊಂಡರು.



ಪದಕ ಪಟ್ಟಿಯಲ್ಲಿ ಭಾರತವು ಐದನೆಯ ಸ್ಥಾನ ಹಿಡಿದಿದೆ. ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚು 50- 44- 46 ಗೆದ್ದ ಆಸ್ಟ್ರೇಲಿಯಾ, 47- 46- 38 ಗೆದ್ದ ಇಂಗ್ಲೆಂಡ್, 19- 24- 24 ಜಯಿಸಿದ ಕೆನಡಾ, 17- 11- 13 ಪದಕ ಪಿಡಿದ ನ್ಯೂಜಿಲ್ಯಾಂಡ್, 9- 8- 9 ಗೆಲ್ದ ಭಾರತ ಮೊದಲ ಐದು ಸ್ಥಾನಗಳಲ್ಲಿ ಇವೆ.

ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ನೈಜೀರಿಯಾ, ವೇಲ್ಸ್, ಮಲೇಶಿಯಾ ಆರೇಳೆಂಟೊಂಬ್ಹತ್ತರ ಸ್ಥಾನಗಳಲ್ಲಿ ಇವೆ.

ಒಟ್ಟು 36 ದೇಶಗಳು ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸ್ಕಾಟ್ಲೆಂಡ್ ಒಟ್ಟು ಪದಕಗಳಲ್ಲಿ ಭಾರತಕ್ಕಿಂತ ಹೆಚ್ಚು ಪಡೆದರೂ ಅದರಲ್ಲಿ 19 ಕಂಚು ಆಗಿರುವುದರಿಂದ ಕೆಳ ಜಾರಿದೆ.

ವೇಲ್ಸ್ ಮತ್ತು ಸ್ಕಾಟ್ಲೆಂಡ್ ಹಾಗೂ ಕೆಲವು ಬ್ರಿಟನ್ನಿನ ಭಾಗವಾಗಿದ್ದರೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತವೆ.


Post a Comment

0 Comments