CWG 2022 Results: ಕುಸ್ತಿಯಲ್ಲಿ ಸುಲಭವಾಗಿ ಗೆದ್ದ ಬಜರಂಗ್- ದೀಪಕ್; ಇತರೆ ಕ್ರೀಡೆಗಳ ವಿವರ ಹೀಗಿದೆ
CWG 2022 Results: ಬಜರಂಗ್ ಪುನಿಯಾ ಅವರಂತೆಯೇ, ದೀಪಕ್ ಪುನಿಯಾ ಕೂಡ ತಮ್ಮ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದರು. ಅವರು ತನ್ನ ಎದುರಾಳಿ ಕುಸ್ತಿಪಟುವನ್ನು ಫಿಟ್ ಬೆಟ್ ಹಾಕುವ ಮೂಲಕ ಸೋಲಿಸಿದರು.
ಕಾಮನ್‌ವೆಲ್ತ್ ಗೇಮ್ಸ್ 2022 (Commonwealth Games 2022)ರಲ್ಲಿ ಭಾರತಕ್ಕೆ 8 ನೇ ದಿನದ ಆರಂಭವು ಅದ್ಭುತವಾಗಿದೆ. ಭಾರತೀಯ ಕುಸ್ತಿಪಟುಗಳಿಂದ ದೇಶವು ಯಾವ ರೀತಿಯ ನಿರೀಕ್ಷೆಯನ್ನು ಹೊಂದಿತ್ತು, ಅವರು ಆ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ. ಬರ್ಮಿಂಗ್‌ಹ್ಯಾಮ್‌ನ ಮ್ಯಾಟ್‌ನಲ್ಲಿ 8ನೇ ದಿನ ಕುಸ್ತಿ ಆರಂಭಗೊಂಡಿದ್ದು, ಬಜರಂಗ್ ಪುನಿಯಾ (Bajrang Punia) ಅವರ ದಂಗಲ್‌ನೊಂದಿಗೆ 3 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ತನ್ನ ಪಂದ್ಯವನ್ನು ಗೆದ್ದುಕೊಂಡರು. ಇದಾದ ಬಳಿಕ ದೀಪಕ್ ಪುನಿಯಾ (Deepak Punia) ಕೂಡ ತಮ್ಮ ವಿಭಾಗದಲ್ಲಿ ಬಜರಂಗ್ ಅವರ ಕಮಾಲ್ ಅನ್ನು ಉಳಿಸಿಕೊಂಡು ಮೊದಲ ದಂಗಲ್ನಲ್ಲಿ ಗೆಲುವನ್ನು ಖಚಿತಪಡಿಸಿಕೊಂಡರು.
ಭಾರತದ ಸೂಪರ್ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ತಮ್ಮ ಪಂದ್ಯವನ್ನು 3 ನಿಮಿಷಗಳಲ್ಲಿ ಗೆದ್ದರು. ಹ್ಯಾಂಗಿಂಗ್ ತಂತ್ರವನ್ನು ಬಳಸಿ ಎದುರಾಳಿಯನ್ನು ಆಖಾಡದಲ್ಲಿ ಕೆಡವಿದರು. ಈ ತಂತ್ರವನ್ನು ಇರಾನಿನ ತಂತ್ರ ಎಂದು ಕರೆಯಲಾಗುತ್ತದೆ. ಕುಸ್ತಿ ತಜ್ಞರ ಪ್ರಕಾರ, ಇರಾನ್‌ನಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆ.ತಂತ್ರಜ್ಞಾನ ಏನೇ ಇರಲಿ, ಒಳ್ಳೆಯ ವಿಷಯವೆಂದರೆ ಬಜರಂಗ್ ಪೂನಿಯಾ ನಿರೀಕ್ಷೆಯಂತೆ ತನ್ನ ಮೊದಲ ಪಂದ್ಯವನ್ನು ಗೆದ್ದರು. ಈ ಮೂಲಕ ಭಾರತದ ಚಿನ್ನದ ಪದಕದ ಭರವಸೆ ಹಾಗೇ ಉಳಿದಿದೆ.
ದೀಪಕ್ ಕಮಾಲ್
ಬಜರಂಗ್ ಪುನಿಯಾ ಅವರಂತೆಯೇ, ದೀಪಕ್ ಪುನಿಯಾ ಕೂಡ ತಮ್ಮ ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದರು. ಅವರು ತನ್ನ ಎದುರಾಳಿ ಕುಸ್ತಿಪಟುವನ್ನು ಫಿಟ್ ಬೆಟ್ ಹಾಕುವ ಮೂಲಕ ಸೋಲಿಸಿದರು. ದೀಪಕ್ ಪೂನಿಯಾ ತಮ್ಮ ಪಂದ್ಯವನ್ನು 10-0 ಅಂತರದಿಂದ ಗೆದ್ದರು.
ಟೇಬಲ್ ಟೆನಿಸ್ನಲ್ಲಿ ಭಾರತದ ಆಟಗಾರರ ಪ್ರಾಬಲ್ಯ
ಭಾವಿನಾ ಪಟೇಲ್ ಪ್ಯಾರಾ ಟೇಬಲ್ ಟೆನಿಸ್ ಫೈನಲ್ ತಲುಪಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಸೆಮಿಫೈನಲ್‌ನಲ್ಲಿ ಭಾವಿನಾ 11-6, 11-6, 11-6ರಲ್ಲಿ ಇಂಗ್ಲೆಂಡ್‌ನ ಸುಯಿ ಬೆಲ್ಲೆ ಅವರನ್ನು ಸೋಲಿಸಿದರು. ಮಿಶ್ರ ಡಬಲ್ಸ್‌ನಲ್ಲಿ ಮನಿಕಾ ಬಾತ್ರಾ ಮತ್ತು ಸತ್ಯನ್ ಜೋಡಿ ಮತ್ತು ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ ಜೋಡಿ ಕ್ವಾರ್ಟರ್ ಫೈನಲ್‌ಗೆ ತಲುಪಿತು. ಮನಿಕಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮಿನ್ಹ್ಯುಂಗ್ ಜಿ ಅವರನ್ನು 4-0 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರು.
ಲಾನ್ ಬಾಲ್‌ನಲ್ಲಿ ಭಾರತಕ್ಕೆ ಸೋಲು
ಲಾನ್ ಬಾಲ್‌ನಲ್ಲಿ ನಡೆದ ಮಹಿಳೆಯರ ಜೋಡಿಯ ಕ್ವಾರ್ಟರ್ ಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಸೋತಿತು. ಲವ್ಲಿ ಚೌಬೆ ಮತ್ತು ನಯನಮೋನಿ ಸಕಿಯಾ ಜೋಡಿ ಸೋಫಿ ಮತ್ತು ಆಮಿ ಜೋಡಿ ಎದುರು ಪರಾಭವಗೊಂಡಿತು.
ಫೈನಲ್‌ನಲ್ಲಿ ಪುರುಷರ ರಿಲೇ ತಂಡ
ಭಾರತ ಪುರುಷರ ತಂಡ 4 x 400 ಮೀಟರ್ಸ್ ರಿಲೇಯಲ್ಲಿ ಪ್ರಬಲ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದೆ. ಮೊಹಮ್ಮದ್ ಅನಸ್, ನೋಹ್ ನಿರ್ಮಲ್, ಮೊಹಮ್ಮದ್ ಅಜ್ಮಲ್ ಮತ್ತು ಅಮೋಜ್ ಜಾಕೋಬ್ ಅವರ ಕ್ವಾರ್ಟೆಟ್ ಹೀಟ್ 2 ನಲ್ಲಿ 3:06.97 ಸಮಯದೊಂದಿಗೆ ಎರಡನೇ ಸ್ಥಾನ ಗಳಿಸಿತು.
0 Comments