ವಿರಾಟ್ ಕೊಹ್ಲಿಗೆ ಫಾರ್ಮ್‌ಗೆ ಮರಳಲು ಬೇಕಾದ ಸಲಹೆಗಳನ್ನು ನೀಡಬಲ್ಲೆ: ಗಾವಸ್ಕರ್
ಗಾವಸ್ಕರ್ |
ನವದೆಹಲಿ: ವಿರಾಟ್ ಕೊಹ್ಲಿ ಅವರು ಹಳೆಯ ಲಯಕ್ಕೆ ಮರಳಲು ಬೇಕಾದ ಸಲಹೆಗಳನ್ನು ನೀಡಲು ಸಿದ್ಧ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗಾವಸ್ಕರ್ ಹೇಳಿದ್ದಾರೆ.
‘ಕೊಹ್ಲಿ ಅವರು ನನ್ನೊಂದಿಗೆ 20 ನಿಮಿಷ ಇದ್ದರೆ ಸಾಕು. ಬ್ಯಾಟಿಂಗ್‌ನಲ್ಲಿನ ಲೋಪಗಳನ್ನು ಸರಿಪಡಿಸಲು ಏನು ಮಾಡಬೇಕು ಎಂಬುದನ್ನು ಹೇಳಿಕೊಡುತ್ತಿದ್ದೆ. ನನ್ನ ಸಲಹೆಗಳು ಅವರಿಗೆ ಖಂಡಿತವಾಗಿಯೂ ನೆರವಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಅವರಿಗೆ ನೆರವಾಗಲೂಬಹುದು’ ಎಂದಿದ್ದಾರೆ.
‘ವಿಶೇಷವಾಗಿ ಆಫ್‌ಸ್ಟಂಪ್ ಲೈನ್‌ಗೆ ಸಂಬಂಧಿಸಿದಂತೆ ಕೆಲವು ಸಲಹೆಗಳನ್ನು ನೀಡಬಲ್ಲೆ. ಆಫ್‌ಸ್ಟಂಪ್ ಲೈನ್‌ನಲ್ಲಿ ಬರುವ ಎಸೆತಗಳನ್ನು ಎದುರಿಸುವಲ್ಲಿ ಅವರು ಎಡವುತ್ತಿದ್ದಾರೆ’ ಎಂದು ನುಡಿದಿದ್ದಾರೆ.
ICC ODI Rankings: ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ನಾಲ್ವರಿಗೆ ಸ್ಥಾನ
ಸುದೀರ್ಘ ಅವಧಿಯಿಂದ ರನ್ ಬರ ಎದುರಿಸುತ್ತಿರುವ ಕೊಹ್ಲಿ, 2019 ರ ನವೆಂಬರ್ ಬಳಿಕ ಒಂದೂ ಶತಕ ಗಳಿಸಿಲ್ಲ. ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ಕೊನೆಗೊಂಡ ಸರಣಿಯಲ್ಲಿ ಆಡಿದ ಆರು ಇನಿಂಗ್ಸ್‌ಗಳಲ್ಲಿ ಕೇವಲ 76 ರನ್ ಕಲೆಹಾಕಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಏಕದಿನ ಮತ್ತು ಟಿ20 ಸರಣಿಗೆ ಕೊಹ್ಲಿ ಅವರಿಗೆ ‘ವಿಶ್ರಾಂತಿ’ ನೀಡಲಾಗಿದೆ.
0 Comments